Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂತ್ರಸ್ತರಿಗೆ ಬಿಸ್ಕಟ್ ಎಸೆದ ಸಚಿವ ಎಚ್ ಡಿ ರೇವಣ್ಣಗೆ ಸೋಷಿಯಲ್ ಮೀಡಿಯಾದಲ್ಲಿ ತಪರಾಕಿ

ಸಂತ್ರಸ್ತರಿಗೆ ಬಿಸ್ಕಟ್ ಎಸೆದ ಸಚಿವ ಎಚ್ ಡಿ ರೇವಣ್ಣಗೆ ಸೋಷಿಯಲ್ ಮೀಡಿಯಾದಲ್ಲಿ ತಪರಾಕಿ
ಬೆಂಗಳೂರು , ಮಂಗಳವಾರ, 21 ಆಗಸ್ಟ್ 2018 (08:50 IST)
ಬೆಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬಿಸ್ಕತ್ ವಿತರಿಸುವಾಗ ಎಸೆದ ಸಚಿವ ಎಚ್ ಡಿ ರೇವಣ್ಣ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾಸನ ಹಾಲು ಒಕ್ಕೂಟದ ವತಿಯಿಂದ ನೀಡಲಾದ ಬಿಸ್ಕತ್ ಗಳನ್ನು ಸಚಿವರು ಸಂತ್ರಸ್ತರ ಕಡೆಗೆ ಎಸೆಯುವ ದೃಶ್ಯಗಳ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಜನ ಈಗ ಸಚಿವ ರೇವಣ್ಣಗೆ ಹಿಡಿಶಾಪ ಹಾಕುತ್ತಿದ್ದಾರೆ.

ಒಬ್ಬ ಸಚಿವರಾಗಿ ಬಿಸ್ಕತ್ ಎಸೆಯುವ ದರ್ಪ ತೋರಿದ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟೀಕೆ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರೇ ಸಚಿವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಷ್ಟೆಲ್ಲಾ ಆದರೂ ಸಿಎಂ ಕುಮಾರಸ್ವಾಮಿ ಮಾತ್ರ ತಮ್ಮ ಸಹೋದರನ ಬೆಂಬಲಕ್ಕೆ ನಿಂತಿದ್ದಾರೆ. ರೇವಣ್ಣ ದುರಹಂಕಾರದಿಂದ ವರ್ತಿಸಿಲ್ಲ. ಹಾಸನದಿಂದ ಸಂತ್ರಸ್ತರಿಗೆ ಹಾಲು-ಬಟ್ಟೆ ವಿತರಿಸಲಾಗಿದೆ. ಈ ದೃಶ್ಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸಿಎಂ ತಿಪ್ಪೆ ಸಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದ ಹುಟ್ಟುಹಾಕಿದ ಪ್ರಧಾನಿ ಮೋದಿ ಫೋಟೊ ಕುರಿತು ಏಮ್ಸ್ ವೈದ್ಯರು ಹೇಳಿದ್ದೇನು?