ಬೆಂಗಳೂರು: ಅದ್ಯಾಕೋ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಕೊಡುವ ಒಂದೊಂದು ಹೇಳಿಕೆಯೂ ಅವರಿಗೆ ಉರುಳಾಗಿ ಪರಿಣಮಿಸುತ್ತಿದೆ.
ಉತ್ತರ ಕರ್ನಾಟಕದ ಬಗ್ಗೆ ಅವರು ಈ ಮೊದಲು ನೀಡಿದ್ದ ಹೇಳಿಕೆ ಪ್ರತ್ಯೇಕ ರಾಜ್ಯ ಕೂಗು ಹೆಚ್ಚಾಗಲು ಕಾರಣವಾಗಿತ್ತು. ಇದೀಗ ಅದನ್ನು ತಣ್ಣಗಾಗಿಸಲು ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿಸೋಣ ಎಂಬ ಕುಮಾರಸ್ವಾಮಿ ಹೇಳಿಕೆ ಮತ್ತೆ ಅವರಿಗೆ ಸಂಕಷ್ಟ ತರುವ ಎಲ್ಲಾ ಸೂಚನೆ ಕಾಣುತ್ತಿದೆ.
ಸಿಎಂ ಈ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಬೆಳಗಾವಿ ಬೇಡ, ಕುಲಬರ್ಗಿಯನ್ನು ಎರಡನೇ ರಾಜಧಾನಿಯಾಗಿಸಬೇಕು ಎಂಬ ಒತ್ತಾಯ ಹೆಚ್ಚಿದೆ. ಇಲ್ಲಿನ ಹೋರಾಟಗಾರರು ಕುಲಬರ್ಗಿ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಜಿಲ್ಲೆ. ಹೀಗಾಗಿ ಇದನ್ನೇ ಎರಡನೇ ರಾಜಧಾನಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸಿಎಂ ಮುಂದೆ ಹೊಸ ತಲೆನೋವು ಶುರುವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.