ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ವಿರುದ್ಧ ಉತ್ತರಪ್ರದೇಶ ಮೂಲದ ವಕೀಲರೊಬ್ಬರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿಯವರ ಅವಹೇಳನಕಾರಿ ಫೋಟೋ ಹಾಕಿ ಕಳ್ಳ ಪ್ರಧಾನಿ ಎಂದು ಬರೆದುಕೊಂಡಿದ್ದರು. ಇದರ ವಿರುದ್ಧ ವಕೀಲ ಸೈಯದ್ ರಿಜ್ವಾನ್ ಎಂಬವರು ದೂರು ದಾಖಲಿಸಿದ್ದಾರೆ.
ರಮ್ಯಾಗೆ ಈ ಪೋಸ್ಟ್ ಅಳಿಸುವಂತೆ ಕೇಳಿಕೊಂಡರೂ ಮಾಡಿರಲಿಲ್ಲ. ಪ್ರಧಾನಿ ಎನ್ನುವ ಪದವಿ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ಪ್ರಧಾನಿ ಮೋದಿ ದೇಶಕ್ಕೆ ಪ್ರಧಾನಿ. ಹೀಗಾಗಿ ರಮ್ಯಾ ಅವಹೇಳನ ಮಾಡಿರುವುದು ದೇಶ ಮತ್ತು ಪ್ರಧಾನಿ ಪದವಿಗೆ. ನನಗೂ ಬಿಜೆಪಿ ಅಥವಾ ಆರ್ ಎಸ್ ಎಸ್ ಗೂ ಸಂಬಂಧವಿಲ್ಲ. ದೇಶದ ಬಗ್ಗೆ ಕಳಕಳಿಯಿರುವ ಸಾಮಾನ್ಯ ನಾಗರಿಕನಾಗಿ ಪ್ರಕರಣ ದಾಖಲಿಸುತ್ತಿದ್ದೇನೆ ಎಂದು ರಿಜ್ವಾನ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಟ್ವಿಟರ್ ಪೇಜ್ ನಲ್ಲಿ ರಮ್ಯಾ ವಿರುದ್ಧ ದಾಖಲಾದ ಎಫ್ ಐಆರ್ ಪ್ರತಿಯನ್ನೂ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.