ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ಆರಂಭಿಸಿದೆ. ಇದೀಗ ಬಿಜೆಪಿ ತಾನು ಸ್ಪರ್ಧಿಸಲಿರುವ ಎಲ್ಲಾ ಕ್ಷೇತ್ರಗಳಿಗೆ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದೆ.
ಎಲ್ಲಾ 543 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಬಿಜೆಪಿ, ಈ ಎಲ್ಲಾ ಕ್ಷೇತ್ರಗಳಿಗೂ ಪ್ರತ್ಯೇಕವಾಗಿ ಒಬ್ಬ ಉಸ್ತುವಾರಿಯನ್ನು ನೇಮಕ ಮಾಡಲಿದೆ.
ಈ ಕ್ಷೇತ್ರದ ಸಂಪೂರ್ಣ ಹೊಣೆ ಆ ಉಸ್ತುವಾರಿ ನಾಯಕನದ್ದಾಗಿರುತ್ತದೆ. ಆ ಮೂಲಕ ಸರಿಯಾಗಿ ಪ್ರಚಾರ ಕೆಲಸ, ಸ್ಥಳೀಯ ಭಿನ್ನಮತಗಳನ್ನು ನಿಭಾಯಿಸುವ ಹೊಣೆ ಆ ನಾಯಕನ ಹೆಗಲಿಗಿರುತ್ತದೆ. ಅಷ್ಟೇ ಅಲ್ಲದೆ, ಪ್ರತೀ ರಾಜ್ಯಕ್ಕೂ 11 ಸದಸ್ಯರ ಸಮಿತಿಯನ್ನು ರಚನೆ ಮಾಡಲಿದ್ದು, ಈ ಸಮಿತಿ ಆಯಾ ರಾಜ್ಯದಲ್ಲಿ ಮುಂದಿನ ಲೋಕಸಭೆಗೆ ಸಿದ್ಧತೆ ನಡೆಸಲಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿ ಇದಕ್ಕಾಗಿ ಮೊದಲೇ ತಯಾರಿ ಆರಂಭಿಸಿದರೆ ಚುನಾವಣೆಯಲ್ಲಿ ಮತ ಸೆಳೆಯುವುದು ಸುಲಭ ಎಂಬ ಲೆಕ್ಕಾಚಾರ ಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.