Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಜ್ ಭವನಕ್ಕೆ ಟಿಪ್ಪು ಹೆಸರು ಬೇಡ, ‘ಉಮ್ಮಾ’ ಎಂದು ನಾಮಕರಣ ಮಾಡಿ!

ಹಜ್ ಭವನಕ್ಕೆ ಟಿಪ್ಪು ಹೆಸರು ಬೇಡ, ‘ಉಮ್ಮಾ’ ಎಂದು ನಾಮಕರಣ ಮಾಡಿ!
ಬೆಂಗಳೂರು , ಶನಿವಾರ, 23 ಜೂನ್ 2018 (12:09 IST)
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಫೈಟ್ ಶುರುವಾಗಿದೆ. ಪ್ರತೀ ಬಾರಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಶುರುವಾಗುವ ಈ ಕದನ ಇದೀಗ ಹಜ್ ಭವನದ ಹೆಸರಿನಲ್ಲಿ ಶುರುವಾಗಿದೆ.

ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಪ್ರಸ್ತಾಪ ಬಂದ ಬೆನ್ನಲ್ಲೇ ಬಿಜೆಪಿ ತಕರಾರು ತೆಗೆದಿದೆ. ಇದೀಗ ತೀವ್ರ ಸ್ವರೂಪ ಪಡೆಯುತ್ತಿದ್ದು, ಮತ್ತೆ ಟಿಪ್ಪು ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟರೆ ಹಜ್ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಕಾಂಗ್ರೆಸ್ ನಾಶವಾಗುತ್ತದೆ ಎಂದು ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿರುವುದನ್ನು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ.

ಇನ್ನೊಂದೆಡೆ ಈ ವಿವಾದಕ್ಕೆ ಸಾಹಿತಿಗಳೂ ಧ್ವನಿಗೂಡಿಸಿದ್ದಾರೆ.  ಹಿರಿಯ ಸಾಹಿತಿ ಮೊಹಮ್ಮದ್ ಕುಂಞ ಹಜ್ ಭವನಕ್ಕೆ ಟಿಪ್ಪು ಹೆಸರು ಇಡುವ ಬದಲು ‘ಉಮ್ಮಾ’ ಎಂದು ನಾಮಕರಣ ಮಾಡಿ ಎಂದು ಸಲಹೆ ನೀಡಿದ್ದಾರೆ. ಅಂತೂ ಮತ್ತೆ ಟಿಪ್ಪು ಹೆಸರಿನಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ತರಾಟೆ