ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಪ್ಲೆಕ್ಸ್ ಬ್ಯಾನರ್ ವಿರುದ್ಧ ಈಗ ಬಿಬಿಎಂಪಿ ಅಧಿಕಾರಿಗಳು ಫೀಲ್ಡ್ ಗಿಳಿದಿದ್ದಾರೆ.
ಅನುಮತಿ ಪಡೆಯದೇ ನಿರ್ಮಾಣವಾಗಿರುವ ಬ್ಯಾನರ್ ಅಂಗಡಿಗಳಿಗೆ ತೆರಳಿ ಅಂಗಡಿಗಳನ್ನು, ಬ್ಯಾನರ್ ಗಳನ್ನು ಸೀಝ್ ಮಾಡುತ್ತಿದೆ. ನಗರದಲ್ಲಿ ಫ್ಲೆಕ್ಸ್ ಆಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಪದೇ ಪದೇ ಹೈಕೋರ್ಟ್ ಚಾಟಿ ಬೀಸುತ್ತಲೇ ಇದೆ.
ಫ್ಲೆಕ್ಸ್ ಬ್ಯಾನರ್ ಬಳಕೆ ಮಾಡಬಾರದು ಅಂತಾ ನಿರ್ದೇಶನ ಇದ್ರೂ ಜನಪ್ರತಿನಿಧಿಗಳೇ ಇದನ್ನು ಉಲ್ಲಂಘಿಸುತ್ತಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕೋಕೆ ಬಿಬಿಎಂಪಿ ಹಿಂದೇಟು ಹಾಕುತ್ತಿದೆ. ಆದರೆ ಈಗ ಕೊನೆಗೂ ಎಚ್ಚೆತ್ತು ಗಾಂಧಿನಗರದಲ್ಲಿ ಅಕ್ರಮ ಪ್ಲೆಕ್ಸ್ ಬ್ಯಾನರ್ ಅಂಗಡಿಗಳಿಗೆ ಬಿಸಿ ಮುಟ್ಟಿಸುವ ಕೆಲ್ಸವನ್ನು ಬಿಬಿಎಂಪಿ ಮಾಡಿದೆ.