ಏರ್ ಪೋರ್ಟ್, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಟೀಂ ನೇಮಕ ಮಾಡಬೇಕು.
ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಮಂಕಿಪಾಕ್ಸ್ ಲಕ್ಷಣವಿದ್ದರೆ ತಪಾಸಣೆ ಕೈಗೊಳ್ಳಬೇಕು. ಮಂಕಿಪಾಕ್ಸ್ ಸೋಂಕು ದೃಢಪಟ್ಟರೆ 21 ದಿನಗಳ ಕಾಲ ಐಸೋಲೇಷನ್ ಮಾಡಬೇಕು.
ಸಂಪೂರ್ಣ ಗುಣಮುಖವಾಗುವವರೆಗೆ ತಜ್ಞರ ಮೇಲ್ವಿಚಾರಣೆಯಲ್ಲಿರಬೇಕು. ಯುಪಿಎಚ್ಸಿಗಳಲ್ಲಿ ಮಂಕಿಪಾಕ್ಸ್ ಬಗ್ಗೆ ಜನರಿಗೆ ಮಾಹಿತಿ ತಿಳಿಸಬೇಕು.
ಮಂಕಿಪಾಕ್ಸ್ ದೃಢವಾಗದಿದ್ದರೂ ವರದಿ ಬರುವವರೆಗೆ ಆರೈಕೆ ಮಾಡಬೇಕು. ಸೋಂಕು ಹರಡದಂತೆ ತಡೆಯುವ ನಿಯಮದಂತೆ ಆರೈಕೆ ಮಾಡಬೇಕು. ಚರ್ಮ, ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ ಒಪಿಡಿಯಲ್ಲಿ ಹೆಚ್ಚಿನ ನಿಗಾವಹಿಸಬೇಕು.