Publish Date: Mon, 25 Oct 2021 (21:41 IST)
Updated Date: Mon, 25 Oct 2021 (21:43 IST)
ಬೆಂಗಳೂರು : ಕೊರೋನಾ 2ನೇ ಅಲೆಯ ನಂತ್ರ, 3ನೇ ಅಲೆ ಬರಲಿದೆ ಎಂಬ ಆತಂಕದಲ್ಲಿ ಜನರಿದ್ದರು. ಆದ್ರೇ ಕೊರೋನಾ 3ನೇ ಅಲೆಯ ಹೆಚ್ಚಳ ಅಷ್ಟೇನು ಆಗಿಲ್ಲ.
ಹೀಗಿರುವಂತ ಜನರಿಗೆ ನರೆಯ ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಹೊಸ ತಳಿಯ ಕೊರೋನಾ ಪತ್ತೆ ಎಂದು ಹೇಳುವ ಮೂಲಕ, ಆರೋಗ್ಯ ಸಚಿವರು ಮತ್ತೊಂದು ಶಾಕ್ ನೀಡಿದ್ದಾರೆ.
ಈ ಕುರಿತಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಈಗಾಗಲೇ ದೇಶದಲ್ಲಿ 3ನೇ ಅಲೆಯ ಹೆಚ್ಚಳದ ಬಗ್ಗೆ ಚರ್ಚೆ ನಡೆಯುತ್ತಿದೆ. ರಷ್ಯಾ, ಇಂಗ್ಲೆಂಡ್ ಗಳಲ್ಲಿಯೂ ಕೊರೋನಾ ಹೊಸ ತಳಿ ಪತ್ತೆಯಾಗಿದೆ. ಇದೇ ಹೊಸ ತಳಿಯ ಕೊರೋನಾ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಬಂದಿರೋದಾಗಿ ವರದಿಯಿಂದ ತಿಳಿದು ಬಂದಿದೆ ಎಂದರು.