Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು : ಮದ್ಯ ಮಾರಾಟ 15% ಇಳಿಕೆ

ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು : ಮದ್ಯ ಮಾರಾಟ 15% ಇಳಿಕೆ
ಬೆಂಗಳೂರು , ಭಾನುವಾರ, 20 ಆಗಸ್ಟ್ 2023 (09:11 IST)
ಬೆಂಗಳೂರು : ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಮದ್ಯದ ಬೆಲೆ ಏರಿಸಿ ಬಿಸಿ ಮುಟ್ಟಿಸಿದ್ದ ಸರ್ಕಾರಕ್ಕೆ ಈಗ ಮದ್ಯಪ್ರಿಯರೇ ಶಾಕ್ ಕೊಟ್ಟಿದ್ದಾರೆ. ನಿರಂತರ ಬೆಲೆ ಏರಿಕೆಯಿಂದ ಮದ್ಯಪ್ರಿಯರು ಎಣ್ಣೆ ಖರೀದಿಸಲು ನಿರಾಸಕ್ತಿ ತೋರಿದ್ದಾರೆ. ಇದರಿಂದಾಗಿ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ.

ಭಾರತೀಯ ಮದ್ಯ ಮಾರಾಟ ಪ್ರಮಾಣ ಶೇ.15 ರಷ್ಟು ಕುಸಿತ ಕಂಡಿದೆ.  ಆದರೆ ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯ ಕಂಡುಬಂದಿಲ್ಲ. ರಾಜ್ಯ ಪಾನೀಯ ನಿಗಮಕ್ಕೆ ಲಿಕ್ಕರ್ಗೆ ಸಲ್ಲಿಸುವ ಖರೀದಿ ಬೇಡಿಕೆ ಇಳಿಕೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರುತ್ತಿತ್ತು. ಈ ಆಗಸ್ಟ್ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ.

2022-ಆಗಸ್ಟ್: ಸ್ವದೇಶಿ ಬ್ರ್ಯಾಂಡ್ – 25.50 ಲಕ್ಷ ಬಾಕ್ಸ್, ಬಿಯರ್ – 10.34 ಲಕ್ಷ ಬಾಕ್ಸ್ ಮಾರಾಟ.
2023 ಆಗಸ್ಟ್: ದೇಶಿ ಬ್ರ್ಯಾಂಡ್ – 21.87 ಲಕ್ಷ ಬಾಕ್ಸ್, ಬಿಯರ್ – 12.52 ಲಕ್ಷ ಬಾಕ್ಸ್ ಮಾರಾಟ.
ಕಡಿಮೆ ದರದ ಬ್ರ್ಯಾಂಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ಕಾಚ್ ಪ್ರಿಯರು ಪ್ರೀಮಿಯರ್ ಬ್ರ್ಯಾಂಡ್ ಕಡೆಗೆ ವಾಲಿದ್ದಾರೆ. ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ್ಯಾಂಡ್ಗೆ ಶಿಫ್ಟ್ ಆಗಿದ್ದಾರೆ. ಹೀಗಾಗಿ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ!