Publish Date: Sun, 06 Aug 2023 (15:00 IST)
Updated Date: Sun, 06 Aug 2023 (14:01 IST)
ಚಾಮರಾಜನಗರ ಜಿಲ್ಲೆಯಲ್ಲಿ ಸೆನ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 16 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದು, ಇಬ್ಬರನ್ನ ಬಂಧಿಸಿದ್ದಾರೆ. ಮೂಕನ ಪಾಳ್ಯ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಕುಮಾರ್ನನ್ನು ಬಂಧಿಸಿದ್ದಾರೆ.. ಬಂಧಿತನಿಂದ 540 ಗ್ರಾಂ ಒಣಗಾಂಜಾ ಹಾಗೂ 3 ಬಾಕ್ಸ್ ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮೂಕನಪಾಳ್ಯದ ಗ್ರಾಮದ ಚಿಕ್ಕುನಾಯಕ್ ಎಂಬಾತನ ಬಂಧಿಸಲಾಗಿದ್ದು, ಪೊಲೀಸರು ಬಂಧಿತನಿಂದ 15.6 ಕೆಜಿ ಹಸಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.