Publish Date: Mon, 22 Mar 2021 (10:36 IST)
Updated Date: Mon, 22 Mar 2021 (10:37 IST)
ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಮತ್ತೆ ಧಾರವಾಹಿಗೆ ಬರುತ್ತಿದ್ದಾರೆ. ಉಮಾಶ್ರೀ ಹೊಸ ಧಾರವಾಹಿಯೊಂದರಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ತಂಡ ಮತ್ತೊಂದು ಧಾರವಾಹಿಯ ಮೂಲಕ ಜೀ ಕನ್ನಡದಲ್ಲಿ ಬರಲಿದೆ. ನಿರ್ದೇಶಕ ಆರೂರ್ ಜಗದೀಶ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮತ್ತೊಂದು ಧಾರವಾಹಿ ಪುಟಕ್ಕನ ಮಕ್ಕಳು. ಈ ಧಾರವಾಹಿಯಲ್ಲಿ ಪುಟ್ಟಕ್ಕನ ಪಾತ್ರವನ್ನು ಉಮಾಶ‍್ರೀ ಮಾಡಲಿದ್ದಾರೆ.
ಇಂದು ಈ ಧಾರವಾಹಿಯ ಮುಹೂರ್ತ ಗುಡ್ಡದ ಆಂಜನೇಯ ದೇವಾಲಯದಲ್ಲಿ ನೆರವೇರಿದೆ. ಉಮಾಶ್ರೀ ಮೂವರು ಹೆಣ್ಣು ಮಕ್ಕಳ ಅಮ್ಮನ ಪಾತ್ರ ನಿರ್ವಹಿಸಲಿದ್ದಾರೆ. ಈಗಾಗಲೇ ಹಲವು ಸೂಪರ್ ಹಿಟ್ ಧಾರವಾಹಿಗಳನ್ನು ನೀಡಿರುವ ಆರೂರ್ ಜಗದೀಶ್ ಮತ್ತೊಂದು ಅಂತಹದ್ದೇ ಮಧ್ಯಮ ವರ್ಗದ ಕುಟುಂಬದ ಮನಮುಟ್ಟುವ ಧಾರವಾಹಿ ಮೂಲಕ ತೆರೆಗೆ ಬರಲಿದ್ದಾರೆ.