ಬೆಂಗಳೂರು: ಶುಭ ವಿವಾಹ, ನಂದಿನಿ ಧಾರವಾಹಿ ಖ್ಯಾತಿಯ ನಟಿ ಕಾವ್ಯ ಶಾಸ್ತ್ರಿ ತಮ್ಮ ಪ್ರೀತಿಯ ಹುಡುಗ ಯಾರೆಂದು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿಕೊಂಡಿದ್ದಾರೆ.
ಕಾವ್ಯ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಿಯಕರ ಸೂರಜ್ ನೊಂದಿಗಿರುವ ಫೋಟೋ ಪ್ರಕಟಿಸಿದ್ದು, ಇವರೇ ನನ್ನ ಲವ್ ಆಫ್ ಲೈಫ್ ಎಂದು ಬರೆದುಕೊಂಡಿದ್ದಾರೆ. ಇವರು ನನ್ನ ಪಾಲಿಗೆ ಭರವಸೆಯ ಬೆಳಕು ನೀಡುವ ಸೂರಜ್. ಇವರು ನನ್ನ ಕಾಲೇಜು ಗೆಳೆಯ. ನಮ್ಮಿಬ್ಬರ ಗೆಳೆತನ 15 ವರ್ಷಗಳಷ್ಟು ಹಳೆಯದು. ನಾನು ಸಿಂಗಲ್ ಆಗಿದ್ದೀನಾ, ಬಾಯ್ ಫ್ರೆಂಡ್ ಇದಾರಾ ಎಂದು ಪ್ರಶ್ನಿಸುವವರಿಗೆ ಇದುವೇ ಉತ್ತರ ಎಂದು ಬರೆದುಕೊಂಡಿದ್ದಾರೆ.
ತಮ್ಮ ಗೆಳೆಯನ ಜನ್ಮದಿನದಂದೇ ಕಾವ್ಯ ತಮ್ಮಿಬ್ಬರ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಇನ್ನು, ಕಾವ್ಯ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸುತ್ತಿದ್ದಂತೇ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.