ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮನೆಯೊಳಗೆ ಬಾಯ್ತಪ್ಪಿನಿಂದ ಭೋವಿ ಜನಾಂಗಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಿದ್ದ ಸಿಹಿ ಕಹಿ ಚಂದ್ರು ಕ್ಷಮೆ ಯಾಚಿಸಿದ್ದಾರೆ.
ಸಹ ಸ್ಪರ್ಧಿ ದಿವಾಕರ್ ಜತೆಗೆ ಕಿಚನ್ ಏರಿಯಾದಲ್ಲಿ ಮಾತನಾಡುವಾಗ ‘ವಡ್ಡ’ ಎಂದು ಸಿಹಿ ಕಹಿ ಚಂದ್ರು ಪದ ಪ್ರಯೋಗ ಮಾಡಿದ್ದರು. ಅದು ಒರಟ ಎನ್ನುವುದಕ್ಕೆ ಬಳಸಿದ್ದೆ ಎಂದು ಸಮಜಾಯಿಷಿ ಕೊಟ್ಟಿದ್ದರು.
ಆದರೆ ಸಿಹಿ ಕಹಿ ಚಂದ್ರು ಅವರ ಈ ಪದ ಪ್ರಯೋಗ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಗ್ ಬಾಸ್ ಮನೆಯಿರುವ ಇನೋವಾ ಫಿಲಂ ಸಿಟಿ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಈ ಘಟನೆಯ ನಂತರ ಚಂದ್ರು ಅವರನ್ನು ಕನ್ ಫೆಷನ್ ರೂಂಗೆ ಕರೆಸಿಕೊಂಡ ಬಿಗ್ ಬಾಸ್ ಘಟನೆ ಬಗ್ಗೆ ಏನಾದರೂ ಹೇಳಲು ಬಯಸುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರು, ನಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಆ ಪದ ಬಳಸಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ