ಬೆಂಗಳೂರು: ಮೊನ್ನೆಯಷ್ಟೇ ಬಂಧಿತನಾಗಿರುವ ಡ್ರಗ್ ಪೆಡ್ಲರ್, ರಿಯಾಲಿಟಿ ಶೋ ಸ್ಟಾರ್ ಕಿಶೋರ್ ಶೆಟ್ಟಿ ತನಗೆ ಆಂಕರ್ ಅನುಶ್ರೀ ಪರಿಚಯವಿದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನಂತೆ! ಇದೀಗ ಅನುಶ್ರೀಗೆ ಸಂಕಷ್ಟ ತಂದೊಡ್ಡಿದೆ.
ನನಗೆ ಅನುಶ್ರೀ 5 ವರ್ಷಗಳಿಂದ ಪರಿಚಯವಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅನುಶ್ರೀ ನನಗೆ ಆತನನ್ನು ಡ್ಯಾನ್ಸ್ ರಿಯಾಲಿಟಿ ಶೋ ಸಮಯದಲ್ಲಿ ಪರಿಚಯವಿತ್ತು. ಅದು ಸುಮಾರು 10 ವರ್ಷಗಳ ಹಿಂದೆ. ಆದರೆ ಆತನ ವ್ಯವಹಾರವಾಗಲೀ, ಆತನ ಬ್ಯಾಕ್ ಗ್ರೌಂಡ್ ಆಗಲೀ ಏನೂ ಗೊತ್ತಿಲ್ಲ. ನನ್ನ ಊರಿನವರೇ ಅಂತ ಪರಿಚಯವಿತ್ತಷ್ಟೇ. 2-3 ವರ್ಷಗಳ ನಂತರ ನಾನು ಭೇಟಿಯೂ ಆಗಿಲ್ಲ. ನಾನು ತಪ್ಪು ಮಾಡಿಲ್ಲ. ಹಾಗಾಗಿ ಭಯವಿಲ್ಲ. ನನಗೆ ಇದುವರೆಗೆ ಸಿಸಿಬಿಯಿಂದ ನೋಟಿಸ್ ಬಂದಿಲ್ಲ. ಬಂದರೆ ಅದಕ್ಕೆ ಪ್ರತಿಕ್ರಿಯಿಸುತ್ತೇನೆ. ದಯವಿಟ್ಟು ವಿನಾಕಾರಣ ತೇಜೋವಧಿ ಮಾಡಬೇಡಿ. ನಾನು ಯಾವುದೇ ವಿಚಾರಣೆಗೂ ಸಿದ್ಧ. ವಿಚಾರಣೆ ಎಂದ ಮಾತ್ರಕ್ಕೆ ಅಪರಾಧಿ ಎಂದು ಬಿಂಬಿಸಬೇಡಿ ಎಂದಿದ್ದಾರೆ.