ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಒಂದೆಡೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದರೇ ಅದೇ ಇಲಾಖೆಯೊಳಗೆ ಇದ್ದುಕೊಂಡೇ ಉಪ್ಪು ತಿಂದ ಮನೆಗೆ ದ್ರೋಹ ಬಗೆಯುತ್ತಿದ್ದ ಪೊಲೀಸರೂ ಇದ್ದರು.
ಇಲಾಖೆಯೊಳಗಿದ್ದುಕೊಂಡೇ ಆರೋಪಿಗಳಿಗೆ ತನಿಖೆಯ ಬಗ್ಗೆ ಮಾಹಿತಿ ನೀಡಿ ಸಹಾಯ ಮಾಡುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಒಬ್ಬ ಎಸಿಪಿ ಎಂ.ಆರ್. ಮುಧವಿ ಮತ್ತು ಮುಖ್ಯ ಪೇದೆ ಮಲ್ಲಿಕಾರ್ಜುನ್ ಸಸ್ಪೆಂಡ್ ಆದವರು. ಈ ಇಬ್ಬರೂ ಪೊಲೀಸರು ಆರೋಪಿಗಳ ಸಂಬಂಧಿಗಳಿಗೆ ತನಿಖೆಯ ಮುಂದಿನ ಹಾದಿ ಬಗ್ಗೆ ಮೊದಲೇ ಮಾಹಿತಿ ನೀಡುತ್ತಿದ್ದುದರಿಂದ ತನಿಖೆಗೆ ತೊಂದರೆಯಾಗುತ್ತಿತ್ತು. ಇದೀಗ ಆಂತರಿಕ ತನಿಖೆ ನಡೆಸಿದ ಪೊಲೀಸ್ ಇಲಾಖೆ ತಪ್ಪಿತಸ್ಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ.