ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾದ್ದರಿಂದ ಕನ್ನಡ ಕಿರುತೆರೆ ಮತ್ತೆ ಸಕ್ರಿಯವಾಗಿದೆ. ಧಾರವಾಹಿಗಳು ಪುನರಾರಂಭವಾಗಿದೆ. ಇದೀಗ ಧಾರವಾಹಿಗಳ ಮೂಲಕವೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಿರುತೆರೆ ಮಾಡುತ್ತಿದೆ.
ಧಾರವಾಹಿಗಳ ಮುಖ್ಯ ಕಥಾವಸ್ತು ಈಗ ಕೊರೋನಾ ಜಾಗೃತಿಯಾಗಿದೆ. ಕೊರೋನಾ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಶುಚಿತ್ವ ಕಾಪಾಡುವ ಬಗ್ಗೆ ಧಾರವಾಹಿಗಳ ಪಾತ್ರಗಳ ಮೂಲಕ ಸಂದೇಶ ನೀಡಲಾಗುತ್ತಿದೆ.
ಅದರ ಜತೆಗೆ ಧಾರವಾಹಿಗಳ ದೃಶ್ಯಗಳ ನಡುವೆ ಆಗಾಗ ಚಿತ್ರೀಕರಣದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಸುರಕ್ಷಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಗಾಗ ಸೂಚನೆಯನ್ನೂ ಪ್ರಕಟಿಸಲಾಗುತ್ತಿದೆ. ಈ ಮೂಲಕ ಧಾರವಾಹಿಗಳೂ ಕೊರೋನಾ ಮಯವಾಗಿದೆ.