Publish Date: Tue, 02 Jun 2020 (12:00 IST)
Updated Date: Tue, 02 Jun 2020 (12:02 IST)
ಲಕ್ನೋ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೊರೋನಾದಿಂದಾಗಿ ಬದುಕು ಕಳೆದುಕೊಂಡ ಕಾರ್ಮಿಕರ ನೆರವಿಗೆ ಮುಂದಾಗಿದ್ದಾರೆ. ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿರುವವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ತವರು ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ವಲಸೆ ಕಾರ್ಮಿಕರಿಗಾಗಿ ಉಚಿತ ಆಹಾರ ಮತ್ತು ಮಾಸ್ಕ್ ವಿತರಿಸುತ್ತಿದ್ದಾರೆ. ಅಲ್ಲದೆ ತಮ್ಮ ಮನೆಯ ಬಳಿ ಉಚಿತ ಆಹಾರ ನೀಡುವ ಕೇಂದ್ರವೊಂದನ್ನು ತೆರೆದಿದ್ದಾರೆ.
ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆ ಶಮಿ ತಮ್ಮ ಮನೆಯ ಬಳಿ ಹಸಿವಿನಿಂದ ಕುಸಿದು ಬಿದ್ದಿದ್ದ ಕಾರ್ಮಿಕರೊಬ್ಬರನ್ನು ರಕ್ಷಿಸಿದ ಘಟನೆಯನ್ನು ಹೇಳಿದ್ದರು. ಇದೀಗ ಸ್ವತಃ ಅಂತಹ ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ.