Publish Date: Mon, 29 Mar 2021 (09:58 IST)
Updated Date: Mon, 29 Mar 2021 (10:03 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿಯ ನಾಲ್ಕನೇ ವಾರದ ಅಂತ್ಯಕ್ಕೆ ನಟಿ ಚಂದ್ರಕಲಾ ಮೋಹನ್ ಎಲಿಮಿನೇಟ್ ಆಗಿದ್ದಾರೆ.
ಆದರೆ ಇದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಚಂದ್ರಕಲಾ ಮನೆಯೊಳಗೆ ತಮ್ಮ ವಯಸ್ಸಿಗೂ ಮೀರಿ ಒಳ್ಳೆಯ ಪ್ರದರ್ಶನ ಕೊಟ್ಟಿದ್ದರು. ಹಾಗಿದ್ದರೂ ಅವರನ್ನೇ ಹೊರಹಾಕಿದ್ದೇಕೆ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ, ಇದುವರೆಗೆ ನಾಲ್ಕೂ ವಾರಗಳಲ್ಲಿ ಕೇವಲ ಮಹಿಳಾ ಸ್ಪರ್ಧಿಗಳೇ ಎಲಿಮಿನೇಟ್ ಆಗಿದ್ದಾರೆ. ಹಿರಿಯ ನಟ ಶಂಕರ್ ಅಶ್ವತ್ಥ್ ಟಾಸ್ಕ್ ಗಳಲ್ಲಿ ಹೆಚ್ಚು ಪರ್ಫಾರ್ಮೆನ್ಸ್ ಕೊಡಲಾಗುತ್ತಿಲ್ಲ. ಹಾಗಿದ್ದರೂ ಅವರಿಗೆ ಹೆಚ್ಚು ಅನುಕಂಪ ತೋರಲಾಗುತ್ತಿದೆ. ಮೊದಲು ಅವರನ್ನು ಹೊರ ಕಳುಹಿಸಬೇಕು ಎಂದು ಚಂದ್ರಕಲಾ ಪರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಪರ್ಯಾಸವೆಂದರೆ ಈ ಸೀಸನ್ ನಲ್ಲಿ ಇದುವರೆಗೆ ಒಬ್ಬರೇ ಒಬ್ಬ ಮಹಿಳಾ ಸ್ಪರ್ಧಿ ಕ್ಯಾಪ್ಟನ್ ಕೂಡಾ ಆಗಿಲ್ಲ. ಪುರುಷರದ್ದೇ ಮೇಲುಗೈಯಾಗುತ್ತಿರುವುದು ಮಹಿಳಾ ಸ್ಪರ್ಧಿಗಳ ಅಸಮಾಧಾನಕ್ಕೂ ಕಾರಣವಾಗಿದೆ.