Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲೇ ಮಾಡಿ ರುಚಿಕರವಾದ ಬಿಸ್ಕತ್ ಬರ್ಫಿ

ಮನೆಯಲ್ಲೇ ಮಾಡಿ ರುಚಿಕರವಾದ ಬಿಸ್ಕತ್ ಬರ್ಫಿ
ಮೈಸೂರು , ಶುಕ್ರವಾರ, 14 ಜನವರಿ 2022 (12:37 IST)
ಹೊರೆಗೆ ಹೋದರೆ ವೈರಸ್‍ನ ಭಯ. ಮನೆಯಲ್ಲಿ ಚಿಕ್ಕವರಿಂದ ದೊಡ್ಡವರು ಇಷ್ಟಪಟ್ಟು ತಿನ್ನುವಂತಹ ರುಚಿ ಇದು ಹೊಂದಿರುತ್ತದೆ.

ಎಲ್ಲರ ಮನೆಯಲ್ಲಿ ಬಿಸ್ಕೆಟ್ ಇದ್ದೇ ಇರುತ್ತದೆ. ಅದನ್ನು ಬಳಸಿಕೊಂಡೇ ರುಚಿಕರವಾದ ಹಾಗೂ ಮನೆಯಲ್ಲೇ ಮಾಡಿ ರುಚಿಕರವಾದ ಬಿಸ್ಕೆಟ್ ಬರ್ಫಿ.

ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ  ಬರ್ಫಿ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು

* ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್
* ಸಕ್ಕರೆ – ಅ ಕಪ್
* ತುಪ್ಪ- ಅರ್ಧ ಕೆಜಿ
* ಹಾಲಿನ ಪುಡಿ- 2 ಚಮಚ
* ಹಾಲು- 1 ಕಪ್
* ಡ್ರೈಫ್ರೂಟ್ಸ್- ಅರ್ಧ ಕಪ್

ಮಾಡುವ ವಿಧಾನ

* ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಪಾರ್ಲೆಜಿ ಬಿಸ್ಕೆಟ್ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.
* ನಂತರ ತುಪ್ಪದಲ್ಲಿ ಹುರಿದ ಬಿಸ್ಕೇಟ್ನ್ನು ಮಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. 

* ಬಿಸ್ಕೇಟ್ ಪುಡಿಯನ್ನು ಹಾಲಿನ ಪುಡಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಮತ್ತೊಂದು ಬಾಣೆಲೆ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ, ಬಿಸ್ಕೆಟ್ ಪುಡಿಯನ್ನು ಹಾಕಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ. 

* ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ರುಚಿಕರವಾದ ಪಲಾಕ್ ಸೊಪ್ಪಿನ ಪಲಾವ್