Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಖತ್ ರುಚಿಕರವಾದ ಪಲಾಕ್ ಸೊಪ್ಪಿನ ಪಲಾವ್

ಸಖತ್ ರುಚಿಕರವಾದ ಪಲಾಕ್ ಸೊಪ್ಪಿನ ಪಲಾವ್
ಬೆಂಗಳೂರು , ಶುಕ್ರವಾರ, 14 ಜನವರಿ 2022 (08:19 IST)
ಪಾಲಕ್ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳಿವೆ. ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ.
 
ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಕರ ಸಹ ಹೌದು.  ಪಾಲಾಕ್ ರೈಸ್  ಮಾಡುವ ಸರಳ ವಿಧಾನ ನಿಮಗಾಗಿ

ಬೇಕಾಗುವ ಸಾಮಗ್ರಿಗಳು

* ಅನ್ನ- 1ಕಪ್
* ಪಾಲಾಕ್ ಸೊಪ್ಪು- ಸ್ವಲ್ಪ
* ಈರುಳ್ಳಿ- 1
* ಹಸಿ ಮೆಣಸಿನಕಾಯಿ-2
* ಕರಿಮೆಣಸು
* ಸಾಸಿವೆ- 1 ಚಮಚ
* ಜೀರಿಗೆ- 1ಚಮಚ
* ಲವಂಗ- 2
* ಗೋಡಂಬಿ- ಅಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅಧ ಕಪ್
* ನಿಂಬೆಹಣ್ಣು- 1

ಮಾಡುವ ವಿಧಾನ

* ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ. 

* ನಂತರ ಪಾಲಾಕ್ ಸೊಪ್ಪನ್ನು ಅದಕ್ಕೆ ಹಾಕಿ ಹುರಿಯಬೇಕು. ಅರ್ಧ ಕಪ್ ನೀರು ಹಾಕಿ ಕುದಿಯುವವರೆಗೂ ಸಣ್ಣ ಉರಿಯಲ್ಲಿ ಇಟ್ಟು ಕುದಿಸಿ. 

* ಈಗ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಬೇರೆ ಬಾಣಲೆಯಲ್ಲಿ ಹಾಕಿ ಹುರಿಯಿರಿ.

* ಎಲ್ಲಾ ಪದಾರ್ಥಗಳನ್ನು ಹುರಿದುಕೊಂಡ ಮೇಲೆ ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣ, ಅನ್ನವನ್ನು ಹಾಕಿ ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ಕಲಸಿ ತಣ್ಣಗಾಗಲು ಬಿಡಬೇಕು. ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿದರೆ ಪಾಲಾಕ್ ರೈಸ್ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದ ತ್ವಚೆಗೆ ರೋಸ್ ವಾಟರ್ ಬಳಸಿ