Publish Date: Thu, 05 Aug 2021 (10:03 IST)
Updated Date: Thu, 05 Aug 2021 (10:07 IST)
ಟೋಕಿಯೋ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಇಂದು ಬೆಲಾರಷ್ಯನ್ ವನೇಸಾ ಕಲಡಿನ್ಷಾಕಿಯಾ ವಿರುದ್ಧ ಸೋಲನುಭವಿಸಿದ್ದಾರೆ.
ಇದರೊಂದಿಗೆ ಭಾರತದ ಭರವಸೆಯ ಆಟಗಾರ್ತಿಗೆ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿದೆ. ಇಂದು ನಡೆದ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಟಗಾರ್ತಿ ವನೇಸಾ ವಿರುದ್ಧ ಪೋಗಟ್ ಸೋಲು ಅನುಭವಿಸಿದ್ದಾರೆ.
ಆದರೂ ವಿನೇಶ್ ಗೆ ಕಂಚು ಗೆಲ್ಲುವ ಅವಕಾಶವೊಂದಿದೆ. ಅದಕ್ಕಾಗಿ ವನೇಸಾ ಸೆಮಿಫೈನಲ್ ಪಂದ್ಯವನ್ನು ಗೆಲ್ಲಬೇಕು. ಒಂದು ವೇಳೆ ವನೇಸಾ ಸೆಮಿಫೈನಲ್ ಗೆದ್ದರೆ ವಿನೀಶ್ ಗೆ ಕಂಚಿನ ಪದಕಕ್ಕಾಗಿ ಆಡುವ ಮತ್ತೊಂದು ಅವಕಾಶ ಸಿಗಲಿದೆ.