ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಿಂದ ಹಿರಿಯ, ಅನುಭವಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ರನ್ನೇ ಕೈಬಿಟ್ಟ ಟೀಂ ಇಂಡಿಯಾ ನಿರ್ಧಾರವನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಇಂಗ್ಲೆಂಡ್ ಪಿಚ್ ಗಳಲ್ಲಿ ಆಡಿದ ಅನುಭವವಿರುವ ರವಿಚಂದ್ರನ್ ಅಶ್ವಿನ್ ರನ್ನು ತಂಡದಿಂದ ಕೈಬಿಟ್ಟು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮೂರ್ಖತನ ಮಾಡಿದೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಳೆದ ಬಾರಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವರು ಅಶ್ವಿನ್. ಅವರನ್ನೇ ಕೈಬಿಟ್ಟಿದ್ದು ನಿಜಕ್ಕೂ ಶಾಕ್. ಇದೆಂಥಾ ಆಯ್ಕೆ ಪ್ರಕ್ರಿಯೆ ಎಂದು ಟ್ವಿಟರಿಗರು ಆಕ್ರೋಶ ಹೊರಹಾಕಿದ್ದಾರೆ.