Publish Date: Mon, 30 Aug 2021 (09:34 IST)
Updated Date: Mon, 30 Aug 2021 (09:41 IST)
ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಮತ್ತಷ್ಟು ಪದಕ ಗೆದ್ದುಕೊಂಡಿದೆ. ಡಿಸ್ಕಸ್ ಥ್ರೋ, ಜ್ವಾವೆಲನ್ ಥ್ರೋನಲ್ಲಿ ಭಾರತಕ್ಕೆ ಇಂದು ಬೆಳ್ಳಿ ಪದಕ ಗೆದ್ದುಕೊಂಡಿದೆ.
ಡಿಸ್ಕಸ್ ಥ‍್ರೋನಲ್ಲಿ ಯೋಗೇಶ್ ಕತುನಿಯಾ ಇಂದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಜ್ವಾವೆಲಿನ್ ಥ್ರೋನಲ್ಲಿ ನಿರೀಕ್ಷೆಯಂತೇ ದೇವೇಂದ್ರ ಜಝಾರಿಯಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಶೂಟಿಂಗ್ ನಲ್ಲಿ ಅವನಿ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಭಾರತ ಇಂದೂ ಉತ್ತಮ ಪ್ರದರ್ಶನ ಮುಂದುವರಿಸಿದ್ದು ತನ್ನ ಪದಕದ ಬೇಟೆ ಮುಂದುವರಿಸಿದೆ.