ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಶೂಟರ್ ಅವನಿ ಲೆಖರ ಇಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅವನಿ ಚಿನ್ನ ಗೆದ್ದು ವಿಶ್ವದಾಖಲೆ ಮಾಡಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ತಾರೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
249.6 ಶಾಟ್ ಹೊಡೆದ ಅವನಿ 2018 ರಲ್ಲಿ ಉಕ್ರೇನ್ ತಾರೆ ಮಾಡಿದ್ದ ವಿಶ್ವ ದಾಖಲೆ ಸಮಗೊಳಿಸಿದ್ದಾರೆ. ಇದು ಭಾರತಕ್ಕೆ ಈ ಪ್ಯಾರಾಲಿಂಪಿಕ್ಸ್ ನಲ್ಲಿ ಸಿಕ್ಕಿದ ನಾಲ್ಕನೇ ಪದಕವಾಗಿದೆ.
ನಿನ್ನೆ ಎರಡು ಪದಕಗಳನ್ನು ಭಾರತ ಗೆದ್ದುಕೊಂಡಿತ್ತು. ಇಂದು ಬೆಳ್ಳಂ ಬೆಳಿಗ್ಗೆಯೇ ಶುಭಾರಂಭ ಮಾಡಿದ್ದು, ಮತ್ತಷ್ಟು ಪದಕಗಳ ನಿರೀಕ್ಷೆ ಭಾರತದ ತಾರೆಯರ ಮೇಲಿದೆ.