ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಅತ್ಯಧಿಕ ಪದಕ ಗೆದ್ದು ಈ ಬಾರಿ ಭಾರತೀಯರು ಸಾಧನೆ ಮಾಡಿದ್ದರು. ಇದೀಗ ಟೋಕಿಯೋ ನಗರ ಪ್ಯಾರಾಲಿಂಪಿಕ್ಸ್ ಗೆ ಸಿದ್ಧವಾಗಿದೆ.
ಇಂದಿನಿಂದ ಪ್ಯಾರಾಲಿಂಪಿಕ್ಸ್ ಆರಂಭವಾಗಲಿದ್ದು, ಭಾರತೀಯ ತಾರೆಗಳ ಮೇಲೆ ನಿರೀಕ್ಷೆಯಿದೆ. ಇಂದು ಸಂಜೆ 4.30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಭಾರತದಿಂದ ಈ ಬಾರಿ ಗರಿಷ್ಠ 54 ಕ್ರೀಡಾಳುಗಳು ಭಾಗಿಯಾಗುತ್ತಿದ್ದಾರೆ. 2012 ರಲ್ಲಿ ಕನ್ನಡಿಗ ಗಿರೀಶ್ ನಾಗರಾಜೇಗೌಡ ಹೈಜಂಪ್ ನಲ್ಲಿ ಬೆಳ್ಳಿ ಗೆದ್ದಿದ್ದೇ ಭಾರತದ ಇದುವರೆಗಿನ ಅತ್ಯುನ್ನತ ಸಾಧನೆ. ಇದೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಆಯೋಜಿಸಲಾಗುತ್ತಿದ್ದು, ಈ ಪಂದ್ಯದ ಮೇಲೆ ಭಾರತಕ್ಕೆ ಪದಕದ ಭರವಸೆಯಿದೆ. ಇದಲ್ಲದೆ, ಆರ್ಚರಿ, ಶೂಟಿಂಗ್, ಜಾವೆಲಿನ್ ಥ್ರೋ, ಪವರ್ ಲಿಫ್ಟಿಂಗ್ ಇತ್ಯಾದಿ ವಿಭಾಗಗಳಲ್ಲಿ ಭಾರತ ಸ್ಪರ್ಧಿಸುತ್ತಿದೆ.