Publish Date: Tue, 24 Aug 2021 (09:00 IST)
Updated Date: Tue, 24 Aug 2021 (09:13 IST)
ಲೀಡ್ಸ್: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಮಾಜಿ ನಾಯಕ, ವೇಗಿ ಕಪಿಲ್ ದೇವ್ ದಾಖಲೆಯೊಂದನ್ನು ಮುರಿಯಲು ಹೊರಟಿದ್ದಾರೆ.
ಕಳೆದ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಮಿಂಚಿ ಟೀಂ ಇಂಡಿಯಾ ಗೆಲುವಿನ ರೂವಾರಿಯಾಗಿದ್ದ ಬುಮ್ರಾ ಮೂರನೇ ಟೆಸ್ಟ್ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಅವರೀಗ 22 ಪಂದ್ಯಗಳಿಂದ 95 ವಿಕೆಟ್ ಕಬಳಿಸಿದ್ದು, ಮೂರನೇ ಪಂದ್ಯದಲ್ಲಿ ಇನ್ನೂ ಐದು ವಿಕೆಟ್ ಪಡೆದರೆ ಅತೀ ವೇಗವಾಗಿ ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್ ಪಡೆದ ಟೀಂ ಇಂಡಿಯಾ ವೇಗಿ ಎಂಬ ದಾಖಲೆ ಮಾಡಲಿದ್ದಾರೆ. ಇದೀಗ ಈ ದಾಖಲೆ ಕಪಿಲ್ ಹೆಸರಿನಲ್ಲಿದೆ. ಕಪಿಲ್ 25 ಟೆಸ್ಟ್ ಪಂದ್ಯಗಳಿಂದ ಈ ಸಾಧನೆ ಮಾಡಿದ್ದರು. ಬುಮ್ರಾ ಸದ್ಯದ ಫಾರ್ಮ್ ನೋಡಿದರೆ ಈ ಪಂದ್ಯದಲ್ಲೇ ದಾಖಲೆಯಾದರೂ ಅಚ್ಚರಿಯಿಲ್ಲ.