ನವದೆಹಲಿ: ಸಚಿನ್ ತೆಂಡುಲ್ಕರ್ ಭಾರತ ಕ್ರೀಡಾ ಕ್ಷೇತ್ರದಲ್ಲಿ ದೇಶದ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿ ಗೆದ್ದಾಗ ಭಾರತದ ಇನ್ನೊಬ್ಬ ಕ್ರೀಡಾಳುವಿಗೂ ಭಾರತ ರತ್ನ ನೀಡಬೇಕಿತ್ತು ಎಂಬ ಒತ್ತಾಯ ಕೇಳಿಬಂದಿತ್ತು.
ಇದೀಗ ಅದು ನನಸಾಗುತ್ತಿದೆ. ಅವರೇ ಹಾಕಿ ಮಾಂತ್ರಿಕ ಧ್ಯಾನ್ ಚಂದ್. ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ನಿಂದಲೇ ಭೇಷ್ ಎನಿಸಿಕೊಂಡಿದ್ದ ಧ್ಯಾನ್ ಚಂದ್ ದೇಶ ಕಂಡ ಅಪ್ರತಿಮ ಹಾಕಿ ಆಟಗಾರ. ದೇಶಕ್ಕೆ ಮೂರು ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದು ಕೊಟ್ಟವರು.
ಇದೀಗ ಅವರಿಗೆ ಭಾರತ ರತ್ನ ನೀಡಲು ಕ್ರೀಡಾ ಸಚಿವಾಲಯವೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಎಲ್ಲಾ ಸರಿ ಹೋಗಿದ್ದರೆ 2013 ರಲ್ಲೇ ಧ್ಯಾನ್ ಚಂದ್ ಗೆ ಈ ಪ್ರಶಸ್ತಿ ಸಿಗಬೇಕಿತ್ತು. ಆದರೆ ಆಗ ಅಂದು ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದ ಸಚಿನ್ ತೆಂಡುಲ್ಕರ್ ಗೆ ಈ ಮೊದಲ ಗೌರವ ಸಂದಿತ್ತು.