Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವುದೇ ತಂಡವನ್ನೂ ಲಘುವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ

ಯಾವುದೇ ತಂಡವನ್ನೂ ಲಘುವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ
ಓವಲ್ , ಗುರುವಾರ, 8 ಜೂನ್ 2017 (08:16 IST)
ನಾವು ಯಾವುದೇ ತಂಡವನ್ನೂ ಲಘುವಾಗಿ ಪರಿಗಣಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮೊದಲ ಪಂದ್ಯ ಗೆದ್ದು ಬೀಗುತ್ತಿರುವ ಟೀಮ್ ಇಂಡಿಯಾ ಇಂದು ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದ್ಲಿ ಶ್ರೀಲಂಕಾ ವಿರುದ್ಧ ಸೆಣೆಸಲಿದೆ. ಓವಲ್`ನಲ್ಲಿಂದು ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಶ್ರೀಲಂಕಾಗೆ ಡು ಆರ್ ಡೈ ಪಂದ್ಯವಾಗಿದೆ.
ಪಂದ್ಯದ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ. ನಮ್ಮ ತಂಡ ಈಗ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ ಅದನ್ನೇ ಮುಂದುವರೆಸುವತ್ತ ಪ್ರಯತ್ನ ನಡೆಸುತ್ತೇವೆ. ಇದರರ್ಥ ನಾವು ಅಹಂಕಾರಿಗಳಾಗಿದ್ದೇವೆಂದಲ್ಲ. ಯಾವುದೇ ಎದುರಾಳಿ ತಂಡವನ್ನ ಗೌರವಿಸುತ್ತೇವೆ. ಯಾವುದೇ ತಂಡ ಯಾವುದೇ ಸಂದರ್ಭದಲ್ಲಿ ಸಿಡಿದೇಳಬಹುದು ಎಂದು ವಿರಾಟ್ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಶ್ರೀಲಂಕಾ ವಿಶ್ವದ ಟಾಪ್ 8 ತಂಡಗಲಲ್ಲಿ ಒಂದು. ಐಸಿಸಿ ಸರಣಿಗಳಲ್ಲಿ ಇದುವರೆಗೆ ಒಳ್ಳೆಯ ಪ್ರದರ್ಶನವನ್ನೇ ನೀಡುತ್ತಿದ್ದು, ಪ್ರತಿಭಾನ್ವಿತ ಆಟಗಾರರಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಗೆ ಆಗಮಿಸಿದ ಕೊಹ್ಲಿ ಫುಲ್ ರಿಲ್ಯಾಕ್ಸ್ ಮೂಡ್`ನಲ್ಲಿದ್ದರು. ಈ ಸಂದರ್ಭ ಮಾಧ್ಯಮದವರಿಗೆ ಸವಾಲು ಹಾಕಿದ ಕೊಹ್ಲಿ ಬೌಲರ್`ಗಳ ೆದುರು ಅವರನ್ನ ಬ್ಯಾಟಿಂಗ್ ಮಾಡುವುದಕ್ಕೆ ಹೇಳಿ ಎಂದರು. ಆದರೆ, ಕೊಹ್ಲಿ ಮಾತನ್ನ ಹೇಳಿದ್ದು ತಮಾಷೆಗೆ.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಪೆಪ್ಸಿಕೊ ಸಂಸ್ಥೆಗೆ ಕೈಕೊಟ್ಟಿದ್ದೇಕೆ ಗೊತ್ತಾ?!