ನವದೆಹಲಿ: ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈಬಾರಿ ಪತಿ, ಪತ್ನಿ ಸಂಬಂಧದ ಬಗ್ಗೆ ಹಾಸ್ಯಮಯ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಬರೆದಿರುವ ಅವರು, ಪತಿ ಕುಟುಂಬದ ತಲೆ ಇದ್ದ ಹಾಗೆ, ಪತ್ನಿ ಕುತ್ತಿಗೆ ಇದ್ದಂತೆ. ಕುತ್ತಿಗೆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತದೆ ಎಂದು ಟ್ವೀಟಿಸಿದ್ದಾರೆ.
ಸೆಹ್ವಾಗ್ ಅವರ ಈ ಟ್ವಿಟ್ ಈಗ ವೈರಲ್ ಆಗಿದ್ದು, ಭಾರೀ ಪ್ರತಿಕ್ರಿಯೆ ಬಂದಿದೆ. ಕೇವಲ ನಾಲ್ಕು ಗಂಟೆಗಳಲ್ಲಿಯೇ 1500 ರೀಟ್ವೀಟ್, 15 ಸಾವಿರ ಲೈಕ್ ಗಳು ಬಂದಿವೆ.