ನವದೆಹಲಿ: ಕಳೆದ ವರ್ಷ ರೋಹಿತ್ ಶರ್ಮಾ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಒಬ್ಬ ಸಾಮಾನ್ಯ ಬೌಲರ್ ಎಂದಿದ್ದರು. ರೋಹಿತ್ ಅಂದು ನೀಡಿದ ಹೇಳಿಕೆಗೆ ಅಮೀರ್ ಇಂದು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರನ್ನು ಆರಂಭದಲ್ಲಿಯೇ ಔಟ್ ಮಾಡಿ ಭಾರತದ ಸೋಲಿಗೆ ಅಮೀರ್ ಮುನ್ನುಡಿ ಬರೆದಿದ್ದರು.
ಬಹುಶಃ ಈಗ ರೋಹಿತ್ ಅಭಿಪ್ರಾಯ ಬದಲಾಗಿರಬಹುದು ಎಂದು ಅಮೀರ್ ಹೇಳಿಕೊಂಡಿದ್ದಾರೆ. ರೋಹಿತ್ ಹೀಗೆ ಕಾಮೆಂಟ್ ಮಾಡಿದ್ದಾಗ ಅಮೀರ್ ಗೆ ತೀರಾ ಬೇಸರವಾಗಿತ್ತಂತೆ. ಇದು ಅವರನ್ನು ಕಾಡುತ್ತಲೇ ಇತ್ತಂತೆ. ಕೊನೆಗೂ ಈಗ ಸೇಡು ತೀರಿಸಿಕೊಂಡ ಖುಷಿಯಲ್ಲಿ ಅಮೀರ್ ಇದ್ದಾರಂತೆ. ಇದನ್ನು ಒಂದು ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ