Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಹ್ವಾಗ್ ಶತಕದ ದಾಖಲೆ ಮುರಿದ ಕೆ.ಎಲ್ ರಾಹುಲ್!

ಸೆಹ್ವಾಗ್ ಶತಕದ ದಾಖಲೆ ಮುರಿದ ಕೆ.ಎಲ್ ರಾಹುಲ್!
bengaluru , ಶುಕ್ರವಾರ, 13 ಆಗಸ್ಟ್ 2021 (19:44 IST)
ಕೆ.ಎಲ್. ರಾಹುಲ್ 212 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಅಲ್ಲದೇ ದಿನದಾಂತ್ಯಕ್ಕೆ 242 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 124 ರನ್ ಬಾರಿಸಿ ಔಟಾಗದೇ ಉಳಿದರು. ರಾಹುಲ್ ಪಾಲಿಗೆ ಇದು 6ನೇ ಟೆಸ್ಟ್ ಶತಕವಾಗಿದೆ. ಅಲ್ಲದೇ ಆರಂಭಿಕನಾಗಿ 4ನೇ ಶತಕವಾಗಿದೆ.
ಇದೇ ವೇಳೆ ರಾಹುಲ್ ಆರಂಭಕನಾಗಿ ಏಷ್ಯಾದ ಹೊರಗೆ 4 ಶತಕ ಸಿಡಿಸಿದ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದರು. ರಾಹುಲ್ ಈ ಸಾಧನೆಗಾಗಿ 28 ಇನಿಂಗ್ಸ್ ಪಡೆದರೆ, ಸೆಹ್ವಾಗ್ 4 ಶತಕ ಬಾರಿಸಲು 69 ಇನಿಂಗ್ಸ್ ಪಡೆದಿದ್ದರು. ಸುನೀಲ್ ಗವಾಸ್ಕರ್ 81 ಇನಿಂಗ್ಸ್ ಗಳಲ್ಲಿ 15 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ರಾಹುಲ್ ಏಷ್ಯಾದ ಹೊರಗೆ ಟೆಸ್ಟ್ ಪಂದ್ಯದ ಮೊದಲ ದಿನವೇ ಶತಕ ಸಿಡಿಸಿದ ಸೆಹ್ವಾಗ್ ನಂತರ ಎರಡನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ನವಜ್ಯೋತ್ ಸಿಂಗ್ ಸಿದು 1989ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 116 ರನ್ ಗಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

2ನೇ ಟೆಸ್ಟ್: ಭಾರತ 364ಕ್ಕೆ ಆಲೌಟ್!