ನವದೆಹಲಿ: ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಪದಕ ತಂದುಕೊಡಬಲ್ಲ ಐದು ತಾರೆಯರು ಯಾರಿರಬಹುದು ಎಂದು ನೋಡೋಣ.
ಪಿ.ವಿ. ಸಿಂಧು
ಭಾರತದ ಬ್ಯಾಡ್ಮಿಂಟನ್ ತಾರೆಯ ಮೇಲೆ ಅಪಾರ ಭರವಸೆಯಿದೆ. ಕಳೆದ ಬಾರಿ ಚಿನ್ನ ಗೆಲ್ಲುವಲ್ಲಿ ಫೈನಲ್ಸ್ ನಲ್ಲಿ ಸೋತಿದ್ದ ಸಿಂಧು ಈ ಬಾರಿ ಮತ್ತೆ ಪದಕ ತಂದುಕೊಡುತ್ತಾರೆ ಎಂಬ ನಿರೀಕ್ಷೆ ಭಾರತೀಯರದ್ದು.
ನೀರಜ್ ಛೋಪ್ರಾ
ಏಷ್ಯನ್ ಗೇಮ್ಸ್, 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜ್ವಾವೆಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಕಣ್ಣು ಇದೀಗ ಒಲಿಂಪಿಕ್ಸ್ ಪದಕದ ಮೇಲೆ. ಅವರು ಗುರಿ ತಲುಪಬಹುದು ಎಂಬ ವಿಶ್ವಾಸ ಕ್ರೀಡಾ ಪ್ರೇಮಿಗಳದ್ದು.
ಭಜರಂಗ್ ಪೂನಿಯಾ
65 ಕೆ.ಜಿ. ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಭಜರಂಗ್ ಪೂನಿಯಾ ಕೆಲವು ಸಮಯದಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರ ಆ ಫಾರ್ಮ್ ನ್ನು ಒಲಿಂಪಿಕ್ಸ್ ನಲ್ಲೂ ತೋರಿಸಿ ಪದಕ ತಂದುಕೊಡಬಹುದು ಎಂಬ ನಿರೀಕ್ಷೆಯಿದೆ.
ಮೇರಿ ಕೋಮ್
ಭಾರತದ ಮಹಿಳೆಯರ ಸ್ಪೂರ್ತಿ ಈಕೆ. ಆರು ಬಾರಿಯ ವಿಶ್ವ ಚಾಂಪಿಯನ್ ಭಾರತೀಯ ಬಾಕ್ಸರ್ ಗಳ ಆಶಾ ಕಿರಣ. ಈಗಾಗಲೇ ಒಂದು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಮೇರಿ ಮತ್ತೊಮ್ಮೆ ಆ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.