ಇವತ್ತು ರಾತ್ರಿ ಖಂಡಗ್ರಾಸ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಸಿದ್ಧ ದೇಗುಲಗಳಿಗೆ ಬೀಗ ಹಾಕಲಾಗುತ್ತದೆ. ಮಂಡ್ಯದ ಚೆಲುವರಾಯಸ್ವಾಮಿ ದೇಗುಲ ಸಹ ಸಂಜೆ ಮುಚ್ಚಲಾಗುತ್ತೆ. ಇತ್ತ, ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಸಹ ಗ್ರಹಣಕ್ಕೆ 6 ಗಂಟೆ ಮುಂಚೆ ಬೀಗ ಜಡಿಯಲಾಗುತ್ತೆ.
ರಾತ್ರಿ 10.52ಕ್ಕೆ ಗ್ರಹಣ ಆರಂಭವಾಗಲಿದ್ದು, ಇದಕ್ಕೂ 6 ಗಂಟೆ ಮುಂಚೆ ಸಂಜೆ 4.30ಕ್ಕೆ ದೇಗುಲದ ದರ್ಶನ ಸ್ಥಗಿತಗೊಳಿಸಿ, ದೇಗುಲದ ಬಾಗಿಲು ಮುಚ್ಚಲಾಗುವುದು ಎಂದು ಟಿಟಿಡಿ ತಿಳಿಸಿದೆ. ಕಲ್ಯಾಣೋತ್ಸವ ಬ್ರಹ್ಮೋತ್ಸವ ೆಲ್ಲ ಕಾರ್ಯಕ್ರಮಗಳನ್ನ ಸ್ಥಗಿತಗೊಳಿಸಲಾಗಿದೆ.
ರಾತ್ರಿ 12.48ರ ಸುಮಾರಿಗೆ ಗ್ರಹಣ ಮೋಕ್ಷಕಾಲವಾಗಿದ್ದು, ಗ್ರಹಣ ಮುಗಿದ ಬಳಿಕ ದೇಗುಲದಲ್ಲಿ ಕಬೆಳಗಿನ ಜಾವ ಕೆಲ ಧಾರ್ಮಿಕ ಕಾರ್ಯಗಳನ್ನ ನೆರವೇರಿಸಿ ನಾಳೆ ಮಧ್ಯಾಹ್ನ 2 ಗಂಟೆಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ