ಬೆಂಗಳೂರು: ಶ್ರೀ ಹೇವಿಳಂಬಿ ನಾಮ ಸಂವತ್ಸರದ ಶ್ರಾವಣ ಮಾಸ ಶುಕ್ಷ ಹುಣ್ಣಿಮೆ ಆಗಸ್ಟ್ 7, 2017 ರಂದು ಶ್ರವಣಾ ನಕ್ಷತ್ರ ಮಕರಾ ರಾಶಿಯಲ್ಲಿ ಚೂಡಾಮಣಿ ಕೇತುಗ್ರಸ್ತ ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತದೆ.
ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದರಿಂದ ಇಂದು ನಮ್ಮ ದೇಶದಲ್ಲಿ ಗ್ರಹಣ ಆಚರಣೆಯಿದೆ. ಶ್ರವಣ ನಕ್ಷತ್ರದವರಿಗೆ ಈ ಗ್ರಹಣದ ದೋಷವಿರುತ್ತದೆ. ಹೀಗಾಗಿ ಈ ನಕ್ಷತ್ರದವರು ಗ್ರಹಣ ಕಾಲದಲ್ಲಿ ಗ್ರಹಣ ಸ್ತೋತ್ರ ಪಠಿಸಿ ನಂತರ ತಾಂಬೂಲ ದಕ್ಷಿಣೆ ದಾನ ಮಾಡಬಹುದು.
ಗ್ರಹಣ ಸ್ಪರ್ಶ ಕಾಲ: ರಾತ್ರಿ 10.53
ಗ್ರಹಣ ಮಧ್ಯ ಕಾಲ: ರಾತ್ರಿ 11.50
ಗ್ರಹಣ ಮೋಕ್ಷ ಕಾಲ: ರಾತ್ರಿ 12.48
ಶಾಸ್ತ್ರಗಳ ಪ್ರಕಾರ ಇಂದು ಸಂಧ್ಯಾಕಾಲದ ನಂತರ ಭೋಜನ ಸ್ವೀಕರಿಸಬಾರದು. ವೃದ್ಧರು, ಮಕ್ಕಳು, ರೋಗಿಗಳು ಮಾತ್ರ ಲಘು ಉಪಾಹಾರ ಸೇವಿಸಬಹುದು.