ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥಗಳಲ್ಲಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಜಾಯಿಕಾಯಿ. ಅದರ ವಿಶೇಷವಾದ ಪರಿಮಳ ಮತ್ತು ಗುಣಗಳಿಂದಾಗಿ ಜಾಯಿಕಾಯಿಗೆ ಆಯುರ್ವೇದದಲ್ಲಿ ಬಹಳ ಮಹತ್ವವನ್ನು ನೀಡಲಾಗಿದೆ. ಇದನ್ನು ದಿನನಿತ್ಯ ಬಳಸುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
* ಜಾಯಿಕಾಯಿಯು ಮೂತ್ರಪಿಂಡವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮೂತ್ರಪಿಂಡದ ಸೋಂಕುಗಳ ವಿರುದ್ಧ ಹೋರಾಡುವುದಲ್ಲದೇ ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಆ ಕಲ್ಲುಗಳನ್ನು ಕರಗಿಸುತ್ತದೆ ಮತ್ತು ಅವುಗಳು ಮತ್ತೆ ಬೆಳೆಯದಂತೆ ತಡೆಯುತ್ತದೆ.
* ಜಾಯಿಕಾಯಿಯಲ್ಲಿ ಒರಗು ರುಚಿಯಿರುವ ಕಾರಣ ಇದನ್ನು ಕಷಾಯ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಅತಿಸಾರ, ಹೊಟ್ಟೆನೋವು, ಪಿತ್ತ, ವಾಕರಿಕೆ, ಮಲೇರಿಯಾ ನಿವಾರಣಾ ಔಷಧಗಳ ಬಳಕೆಯಲ್ಲಿ ಜಾಯಿಕಾಯಿಯನ್ನು ಬಳಸುತ್ತಾರೆ.
* ಜಾಯಿಕಾಯಿಯನ್ನು ಅಡುಗೆಯಲ್ಲಿ ಬಳಸುವುದರಿಂದ ರೋಗ ತಡೆಗಟ್ಟುವ ಸಂಯುಕ್ತಗಳು ಅದರಲ್ಲಿ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ.
* ಜಾಯಿಕಾಯಿಯು ರಕ್ತ ಸಂಚಲನೆಯನ್ನು ಹೆಚ್ಚಿಸುತ್ತದೆ.
* ಜಾಯಿಕಾಯಿಯು ರಕ್ತ ಸಂಚಲನೆಯನ್ನು ವರ್ಧಿಸಿ ಮಧುಮೇಹವನ್ನು ತಡೆಗಟ್ಟುವಲ್ಲಿಯೂ ಮತ್ತು ಇತರ ಮಾರಕ ರೋಗಗಳು ಮತ್ತು ಸೋಂಕುಗಳಿಂದ ವ್ಯಕ್ತಿಯನ್ನು ಕಾಪಾಡುವಲ್ಲಿ ನೆರವಾಗುತ್ತದೆ.
* ಹಾರ್ಮೋನುಗಳನ್ನು ಉತ್ತೇಜಿಸುವ ಗುಣಗಳನ್ನು ಜಾಯಿಕಾಯಿಯು ಹೊಂದಿರುವುದರಿಂದ ಇದು ಕಾಮೋತ್ತೇಜಕವಾಗಿ ವರ್ತಿಸುತ್ತದೆ.
* ಜಾಯಿಕಾಯಿಯನ್ನು ಶೀತ ನಿವಾರಣಾ ಲೇಪನಗಳಲ್ಲಿ ಮತ್ತು ಕೆಮ್ಮು ಸಿರಪ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
* ಜಾಯಿಕಾಯಿ ಎಣ್ಣೆಯು ಯುಜೆನೋಲ್‍ಗಳನ್ನು ಒಳಗೊಂಡಿರುವುದರಿಂದ ಹಲ್ಲುಗಳ ಟ್ರೀಟ್‍ಮೆಂಟ್ ಮತ್ತು ಹಲ್ಲಿನ ಔಷಧಿಗಳ ಬಳಕೆಯಲ್ಲಿ ಬಳಸಲಾಗುತ್ತದೆ.
* ವಾಯುಸಂಬಂಧಿತ ಸಮಸ್ಯೆಗಳು, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಿಸುವ ಸಮಸ್ಯೆಗಳ ವಿರುದ್ಧ ಹೋರಾಡಿ ಪಚನ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಡುವಲ್ಲಿ ಇದು ಸಹಾಯಕವಾಗಿದೆ.
* ಜಾಯಿಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ವಾಕರಿಕೆ ಸಮಸ್ಯೆಯು ನಿವಾರಣೆಯಾಗುತ್ತದೆ.
* ಜಾಯಿಕಾಯಿಯು ಹಸಿವನ್ನು ಹೆಚ್ಚಿಸುತ್ತದೆ. ಮತ್ತು ಏನೂ ತಿನ್ನುವುದು ಬೇಡ ಎಂದೆನಿಸಿದಾಗ ಜಾಯಿಕಾಯಿಯನ್ನು ಆಹಾರದಲ್ಲಿ ಬಳಸಿ ಸೇವಿಸಿದಾಗ ಉತ್ತಮ ಪರಿಣಾಮ ನೀಡುವುದಲ್ಲದೇ ಹಸಿವನ್ನು ಹೆಚ್ಚಿಸುತ್ತದೆ.
* ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿಯೂ ಜಾಯಿಕಾಯಿಯು ಸಹಾಯಕವಾಗಿದೆ.
* ಜಾಯಿಕಾಯಿಯಲ್ಲಿರುವ ಕಾಪರ್ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತದೆ.
* ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಜಾಯಿಕಾಯಿಯು ಸೌಂದರ್ಯವೃದ್ಧಿಯಲ್ಲಿಯೂ ಸಹಕಾರಿಯಾಗಿದೆ. ಇದನ್ನು ನಿಯಮಿತವಾಗಿ ಉಪಯೋಗಿಸಿದರೆ ಸ್ಕಿನ್‌ಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ.
* ಜಾಯಿಕಾಯಿ ಎಣ್ಣೆಯು ನರವ್ಯೂಹವು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ದೇಹದ ಡಯಟ್ ಸಿಸ್ಟಮ್ ಸರಿಯಾಗಿರುವಂತೆಯೂ ನೋಡಿಕೊಳ್ಳುತ್ತದೆ.
* ಜಾಯಿಕಾಯಿ ಪೇಸ್ಟ್ ಮಾಡಿ ಅದನ್ನು ಕಣ್ಣಿನ ಕೆಳಗೆ ಪ್ರತಿದಿನ ಹಚ್ಚುವುದರಿಂದ ಕಣ್ಣಿನ ಸುತ್ತಲೂ ಉಂಟಾಗುವ ಕಪ್ಪು ವರ್ತುಲವು ನಿವಾರಣೆಯಾಗುತ್ತದೆ. ಮತ್ತು ಕಲೆಯೂ ಮಾಯವಾಗುತ್ತದೆ.
* ಜಾಯಿಕಾಯಿಯನ್ನು ಪುಡಿ ಮಾಡಿ ಸ್ಕ್ರಬ್ ರೀತಿಯಲ್ಲಿಯೂ ಬಳಕೆ ಮಾಡಬಹುದು. ಇದರಿಂದ ಸ್ಕಿನ್ ಇನ್ಫೇಕ್ಷನ್‌ನ್ನೂ ಕೂಡಾ ತಡೆಯಲು ಇದು ಸಹಕಾರಿ.
* ಜಾಯಿಕಾಯಿಯ ಪೇಸ್ಟ್ ಅನ್ನು ಸಾಸಿವೆ ಎಣ್ಣೆಯ ಜೊತೆ ಮಿಕ್ಸ್ ಮಾಡಿ ಹಚ್ಚುವುದರಿಂದ ಬಿದ್ದು ಆದ ಗಾಯದ ಕಲೆಗಳು ಮಾಯವಾಗುತ್ತದೆ.
* ಜಾಯಿಕಾಯಿ ಚೂರ್ಣವನ್ನು ಕಲ್ಲು ಸಕ್ಕರೆ ಜೊತೆ ಮಿಕ್ಸ್ ಮಾಡಿ ಪ್ರತಿದಿನ ಸೇವನೆ ಮಾಡುವುದರಿಂದ ಲೈಂಗಿಕ ಚಟುವಟಿಕೆಗಳು ಹೆಚ್ಚಾಗಲು ಸಹಾಯವಾಗುತ್ತದೆ.
* ಜಾಯಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲುದುರುವಿಕೆಯ ಸಮಸ್ಯೆಯು ನಿವಾರಣೆಯಾಗುತ್ತದೆ.