ಬೆಂಗಳೂರು: ನಿಂಬೆ ಹಣ್ಣು ಬೇಗನೇ ಬಾಡಿ ಹೋಗುತ್ತದೆ. ಇದನ್ನು ಫ್ರೆಶ್ ಆಗಿ ಇಡಲು ಕೆಲವು ಉಪಾಯ ಮಾಡಿ ನೋಡಬಹುದು.
ನಿಂಬೆ ಹಣ್ಣನ್ನು ತೊಳೆದ ಮೇಲೆ ಏರ್ ಟೈಟ್ ಕವರ್ ನಲ್ಲಿ ಹಾಕಿಡಿ. ಇದರಿಂದ ಅದು ಬೇಗನೇ ಬಾಡುವುದಿಲ್ಲ ಮತ್ತು ವಾಸನೆ ಕಳೆದುಕೊಳ್ಳುವುದಿಲ್ಲ.
ಕತ್ತರಿಸಿ ಉಳಿದ ನಿಂಬೆ ಹಣ್ಣನ್ನು ಒಂದ ತಟ್ಟೆಯಲ್ಲಿ ತಲೆಕೆಳಗಾಗಿ ಇಟ್ಟು ಅದನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಡಿ.
ನಿಂಬೆ ರಸವನ್ನು ಸಂಗ್ರಹಿಸಿಡುವುದಿದ್ದರೆ ಗಾಜಿನ ಪಾತ್ರೆಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಹೊರಗಿಟ್ಟರೆ ಕಹಿಯಾಗಬಹುದು.
ಇದೂ ಸಾಧ್ಯವಿಲ್ಲದಿದ್ದರೆ ನಿಂಬೆ ರಸವನ್ನು ಐಸ್ ಟ್ರೇನಲ್ಲಿ ಹಾಕಿ ಕ್ಯೂಬ್ ಮಾಡಿಕೊಳ್ಳಿ. ನಂತರ ಬೇಕಾದ ಹಾಗೆ ಬಳಸಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ