ಬೆಂಗಳೂರು: ತುಪ್ಪ ಎಂಬ ಅತ್ಯಮೂಲ್ಯ ಆಹಾರ ವಸ್ತು ಇದೀಗ ವಿದೇಶಗಳಲ್ಲೂ ಫೇಮಸ್ಸಾಗುತ್ತಿದೆ. ತುಪ್ಪದಿಂದ ಶೀತ ಕೂಡಾ ನಿವಾರಿಸಬಹುದು! ಹೇಗೆ ಗೊತ್ತಾ? ಇದನ್ನು ಓದಿ.
ಚಳಿಗಾಲದಲ್ಲಿ ತುಪ್ಪ ಹೆಚ್ಚು ಬಳಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಕಾಲಿಗೆ, ಕೈಗೆ, ತುಪ್ಪ ಹಚ್ಚಿಕೊಂಡರೆ ಕೇವಲ ಒಣ ಚರ್ಮಕ್ಕೆ ಮಾತ್ರವಲ್ಲ. ಶೀತದ ಸಮಸ್ಯೆಗೂ ಪರಿಹಾರ ಕೊಡಬಹುದು.
ಶೀತವಿದ್ದಾಗ ಮೂಗಿಗೆ ಒಂದು ಡ್ರಾಪ್ ತುಪ್ಪ ಬಿಡಬಹುದು. ಅಥವಾ ಅಂಗಾಲಿಗೆ ಇಲ್ಲವೇ ಎದೆಗೆ ತುಪ್ಪ ಸವರಿಕೊಂಡರೆ ಆಶ್ವಾಸ ಸಿಗಬಹುದು. ತುಪ್ಪ ಮೂಗು ಕಟ್ಟುವಿಕೆ, ಕಫ ಹೋಗಲಾಡಿಸಲು ಪರಿಣಾಮಕಾರಿ. ಅಷ್ಟೇ ಅಲ್ಲ ಇದು ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ತುಪ್ಪವನ್ನು ಹದ ಬಿಸಿ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಮೂಗಿಗೆ ಡ್ರಾಪ್ ಹಾಕಿದರೆ ಮೂಗು ಕಟ್ಟುವಿಕೆ ದೂರವಾಗುತ್ತದೆ ಎಂದು ಆಯುರ್ವೇದವೇ ಹೇಳುತ್ತದೆ. ಹಾಗಾಗಿ ಇನ್ನೇಕೆ ತಡ? ಚೆನ್ನಾಗಿ ತುಪ್ಪ ತಿನ್ನಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ