ಚಿತ್ರಾನ್ನ, ಪುಳಿಯೊಗರೆ ಈ ಅಡುಗೆಗಳನ್ನು ತಿಂದು ಬೇಜಾರಾಗಿದವರು ಟೊಮೆಟೊ ಎಗ್ ರೈಸ್ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಬೇಯಿಸಿದ ಅನ್ನ, ಬೇಯಿಸಿದ ಮೊಟ್ಟೆ, 4 ಹಸಿಮೆಣಸು, ಟೊಮೆಟೊ, 1ಈರುಳ್ಳಿ ಹೆಚ್ಚಿದ್ದು, ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸ್ವಲ್ಪ, ಧನಿಯಾ ಪುಡಿ, ಖಾರದ ಪುಡಿ, ಎಣ್ಣೆ, ನಿಂಬೆರಸ, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
-
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಬಿಸಿಯಾದ ನಂತರ ಅದಕ್ಕೆ ಚಕ್ಕೆ ಲವಂಗ, ಏಲಕ್ಕಿ, ಹೆಚ್ಚಿದ ಈರುಳ್ಳಿ, ಬಿರಿಯಾನಿ ಎಲೆ, ಸೇರಿಸಿ ಬಾಡಿಸಿ.
-
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ, ಟೊಮೆಟೊ, ಅರಿಶಿನ, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಧನಿಯಾ ಪುಡಿ, ಖಾರದ ಪುಡಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ.
-
ಚೆನ್ನಾಗಿ ಬೇಯಿಸಿದ ನಂತರ ಇದಕ್ಕೆ ಅನ್ನ ಹಾಕಿ ಬೆರೆಸಿ ನಿಂಬೆ ರಸ ಹಿಂಡಿ ನಂತರ ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಇದಕ್ಕೆ ಸೇರಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ