ಬೆಂಗಳೂರು : ಕ್ಯಾರೆಟ್ ನಿಂದ ಹಲವು ಬಗೆಯ ಸಿಹಿತಿಂಡಗಳನ್ನು ತಯಾರಿಸಬಹುಉದ. ಇದು ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಕ್ಯಾರೆಟ್ ನಿಂದ ಸಿಹಿಯಾದ ಬರ್ಫಿ ಮಾಡುವುದು ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : 2 ಕಪ್ ತೆಂಗಿನಕಾಯಿ ತುರಿ, 1 ಕಪ್ ತುರಿದ ಕ್ಯಾರೆಟ್, 2 ಕಪ್ ಬೆಲ್ಲದ ಪುಡಿ, 3 ಚಮಚ ತುಪ್ಪ, 3 ಏಲಕ್ಕಿ.
ಮಾಡುವ ವಿಧಾನ : ಒಂದು ಪಾತ್ರೆ ಬಿಸಿ ಮಾಡಿ ಅದಕ್ಕೆ ನೀರು ಮತ್ತು ಬೆಲ್ಲವನ್ನು ಹಾಕಿ ಕುದಿಸಿ. ಕ್ಯಾರೆಟ್ ರುಬ್ಬಿ ಪೇಸ್ಟ್ ಮಾಡಿ. ಬಳಿಕ ತೆಂಗಿಗಿನ ಕಾಯಿ ಮತ್ತು ಏಲಕ್ಕಿಯನ್ನು ರುಬ್ಬಿ ಕ್ಯಾರೆಟ್ ಜೊತೆ ಮಿಕ್ಸ್ ಮಾಡಿ. ಇದನ್ನು ಕರಗಿದ ಬೆಲ್ಲದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕುದಿಸಿ. ದಪ್ಪವಾಗುತ್ತಿದ್ದಂತೆ ಅದಕ್ಕೆ ತುಪ್ಪವನ್ನು ಸೇರಿಸಿ ತಳ ಬಿಡುವವರೆಗೂ ಬೇಯಿಸಿ. ಬಳಿಕ ತುಪ್ಪ ಸವರಿದ ಪಾತ್ರೆಗೆ ಸುರಿಯಿರಿ. ತಣ್ಣಗಾದ ಮೇಲೆ ಕತ್ತರಿಸಿದರೆ ಕ್ಯಾರೆಟ್ ಬರ್ಫಿ ರೆಡಿ.