Publish Date: Fri, 21 Sep 2018 (17:51 IST)
Updated Date: Fri, 21 Sep 2018 (17:52 IST)
ಸಾಮಗ್ರಿಗಳು:
ಗೋಧಿ ರವೆ (ಉಪ್ಪಿಟ್ಟಿನ ರವೆ) : 2 1/4 ಕಪ್,
ಉದ್ದಿನ ಬೇಳೆ : 1 ಕಪ್,
ಉಪ್ಪು : ರುಚಿಗೆ
ಉದ್ದಿನ ಬೇಳೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ ನಂತರ ಅದನ್ನು 3 ರಿಂದ 4 ಘಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಅದನ್ನು ರಾತ್ರಿ ನುಣ್ಣಗೆ ರುಬ್ಬಿ ಮುಚ್ಚಿಡಿ. ಬೆಳಿಗ್ಗೆ ಎನ್ನುವಷ್ಟರಲ್ಲಿ ಸ್ವಲ್ಪ ಹುದುಗು ಬಂದಿರುತ್ತದೆ. ಬೆಳಿಗ್ಗೆ ಇನ್ನೊಂದು ಪಾತ್ರೆಯಲ್ಲಿ ಮೇಲೆ ಹೇಳಿದಷ್ಟು ರವೆಯನ್ನು ತೆಗೆದುಕೊಂಡು ಅದು ಮುಳುಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿಡಿ. ರವೆ ನೆಂದ ಮೇಲೆ ನೀರು ಜಾಸ್ತಿ ಇದ್ದಲ್ಲಿ ಬಸಿದುಕೊಳ್ಳಿ. ನಂತರ ಅದಕ್ಕೆ ರುಬ್ಬಿದ ಉದ್ದಿನ ಹಿಟ್ಟು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ 15 ರಿಂದ 20 ನಿಮಿಷ ಬಿಡಿ. ಈ ಮಿಶ್ರಣ ಉಳಿದ ದೋಸೆ ಹಿಟ್ಟಿನ ಮಿಶ್ರಣಕ್ಕಿಂತ ಗಟ್ಟಿ ಇರಲಿ ಮತ್ತು ಇಡ್ಲಿ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗಿರಲಿ. ಕಾದ ತವಾ ಮೇಲೆ ದೋಸೆ ಹಿಟ್ಟನ್ನು ಹಾಕಿ ಎರೆದು ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿ ರವಾ ಉದಿನ ದೋಸೆ ಸಿದ್ಧ ಇದು ತುಪ್ಪ ಮತ್ತು ಚಟ್ನಿಯ ಉತ್ತಮವಾಗಿರುತ್ತದೆ
ಚಟ್ನಿ :
ಸಾಮಗ್ರಿಗಳು :
ತೆಂಗಿನ ತುರಿ : 1 ಕಪ್,
ಕೆಂಪು ಮೆಣಸಿನಕಾಯಿ ಕಾಯಿ : 6-7,
ಉದ್ದಿನ ಬೇಳೆ : 1 ಚಮಚ,
ಬಿಳಿ ಎಳ್ಳು: 1/2 ಚಮಚ,
ಹುಣಸೆಹಣ್ಣು : ರುಚಿಗೆ ತಕ್ಕಷ್ಟು
ಬೆಲ್ಲ : 1 ಚಮಚ,
ಎಣ್ಣೆ : 1/4 ಚಮಚ,
ಉಪ್ಪು : ರುಚಿಗೆ
ವಿಧಾನ :
ಉದ್ದಿನ ಬೇಳೆ, ಒಣ ಮೆಣಸಿನ ಕಾಯಿಗೆ ಎಣ್ಣೆ ಹಾಕಿ ಹುರಿದು ಕೊನೆಯಲ್ಲಿ ಎಳ್ಳು ಹಾಕಿ ಹುರಿದುಕೊಳ್ಳಿ. ಮಿಕ್ಸಿ ಜಾರ್‌ಗೆ ಹುರಿದ ಮಿಶ್ರಣದ ಜೊತೆ ಉಳಿದೆಲ್ಲಾ ಸಾಮಗ್ರಿ ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ.
nagashree
Publish Date: Fri, 21 Sep 2018 (17:51 IST)
Updated Date: Fri, 21 Sep 2018 (17:52 IST)