ಮಾಡಲು ಬೇಕಾಗುವ ಪದಾರ್ಥ :
300 ಗ್ರಾಂ ಬೆಂಡೆಕಾಯಿ
2 ಚಮಚ ನಿಂಬೆ ರಸ
½ ಚಮಚ ಅರಿಶಿನ ಪುಡಿ
1 ಚಮಚ ಗರಂ ಮಸಾಲೆ
1 ಚಮಚ ದನಿಯಾ ಪುಡಿ
1 ಚಮಚ ಮೆಣಸಿನ ಪುಡಿ
1 ಚಮಚ ಉಪ್ಪು
50 ಗ್ರಾಂ ಜೋಳದ ಹಿಟ್ಟು
ಕರಿಯಲು ಎಣ್ಣೆ
ಬೆಂಡೆಕಾಯಿ ಪ್ರೈ ಮಾಡುವ ವಿಧಾನ:
ಬೆಂಡೆಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ ಉದ್ದದ ಹೋಳು ಮಾಡಿಕೊಳ್ಳಿ ನಂತರ ಒಂದು ಪಾತ್ರೆಗೆ ಕತ್ತರಿಸಿದ ಬೆಂಡೆಕಾಯಿ, ನಿಂಬೆ ಹಣ್ಣಿನ ರಸ, ಗರಂ ಮಸಾಲೆ, ಅರಿಶಿನ ಪುಡಿ, ದನಿಯಾ ಪುಡಿ, ಮೆಣಸಿನ ಪುಡಿ ಹಾಗೂ ಉಪ್ಪು, ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಕುದಿಯಲು ಬಿಡಿ. ಎಣ್ಣೆ ಬಿಸಿಯಾದ ನಂತರ ಬೆಂಡೆಕಾಯಿ ಮಿಶ್ರಣವನ್ನು ಗರಿಗರಿಯಾಗುವವರೆಗೆ ಕರಿದು ತೆಗೆಯಿರಿ. ಇದಕ್ಕೆ ಪುದಿನಾ ಚಟ್ನಿಯೊಂದಿಗೆ ಇದು ಉತ್ತಮ ಕಾಂಬಿನೇಶನ್ ಎನ್ನಬಹುದು.