ಬೆಂಗಳೂರು : ಹೀರೆಕಾಯಿಯಿಂದ ಬೋಂಡಾ, ಪಲ್ಯ ಸಾರು ಮಾಡಿದರೆ ಎಷ್ಟು ರುಚಿಕರವಾಗಿರುತ್ತೋ ಹೀರೆಕಾಯಿಯ ಹುಳಿತೊವ್ವೆ ಕೂಡ ಅಷ್ಟೇ ರುಚಿಕರವಾಗಿರುತ್ತೆ. ಹಾಗಾದ್ರೆ ಹೀರೆಕಾಯಿ ಹುಳಿತೊವ್ವೆ ಮಾಡೋಣ.
ಬೇಕಾಗುವ ಸಾಮಾಗ್ರಿಗಳು : ಹೀರೆಕಾಯಿ-3, ತೊಗರಿಬೇಳೆ ¼ ಕಪ್, ಚಕ್ಕೆ, ಹುಳಿ, ಕೊತ್ತಂಬರಿ 1ಚಮಚ, ಜೀರಿಗೆ 1 ¼ ಚಮಚ, ಮೆಂತೆ-4 ಕಾಳು, ಉದ್ದಿನಬೇಳೆ 1 ಚಮಚ, ಕಡಲೇಬೇಳೆ-1 ಚಮಚ. ಮೆಣಸು-6, ತೆಂಗಿನಕಾಯಿ ತುರಿ ½ ಕಪ್, ಎಣ್ಣೆ, ಸಾಸಿವೆ, ಕರಿಬೇವು. ಬೆಲ್ಲ, ಉಪ್ಪು.
ಮಾಡುವ ವಿಧಾನ : ಮೊದಲಿಗೆ ಹೀರೆಕಾಯಿಯನ್ನು ಕತ್ತರಿಸಿಕೊಳ್ಳಿ. ಅದಕ್ಕೆ ಬೇಳೆ, ಸ್ವಲ್ಪ ಉಪ್ಪು, ಅರಿಶಿನ ಹಾಕಿ ಕುಕ್ಕರ್ ನಲ್ಲಿ ಎರಡು ವಿಷಲ್ ಹಾಕಿ. ನಂತರ ಒಂದು ಬಾಣಲೆಗೆ ಎಣ್ಣೆ, ಚಕ್ಕೆ, ಮೊಗ್ಗು, ಜೀರಿಗೆ ಕೊತ್ತಂಬರಿ, ಮೆಂತೆ, ಕಡಲೇಬೇಳೆ, ಉದ್ದಿನಬೇಳೆ ಹಾಕಿ ಹುರಿದುಕೊಳ್ಳಿ. ಮೆಣಸನ್ನು ಹುರಿದುಕೊಳ್ಳಿ. . ನಂತರ ಹುರಿದ ಸಾಮಾಗ್ರಿಗಳನ್ನು ಕಾಯಿತುರಿಯೊಂದಿಗೆ ಹುಳಿ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಬೇಯಿಸಿದ ಹೀರೆಕಾಯಿಯನ್ನು ಹಾಕಿ. ಆಮೇಲೆ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಹಾಕಿ. ಬೆಲ್ಲ, ಉಪ್ಪು ಸೇರಿಸಿ. ಚೆನ್ನಾಗಿ ಕುದಿಸಿ.