Publish Date: Thu, 14 May 2020 (09:07 IST)
Updated Date: Thu, 14 May 2020 (09:09 IST)
ಬೆಂಗಳೂರು: ರಾತ್ರಿ ಅನ್ನ ಉಳಿಯಿತು ಎಂಬ ಚಿಂತೆಯೇ? ಹಾಗಿದ್ದರೆ ಅದನ್ನು ಸುಮ್ಮನೇ ವೇಸ್ಟ್ ಮಾಡುವ ಬದಲು ಹೀಗೆ ವಡೆ ತಯಾರಿಸಬಹುದು.
ಉಳಿದ ಅನ್ನಕ್ಕೆ ಮೊಸರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹಸಿಮೆಣಸು, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ ಕಾಳು ಹಾಕಿಕೊಂಡು ಕಲಸಿಟ್ಟುಕೊಳ್ಳಿ. ನೆನಪಿಡಿ, ಹಿಟ್ಟು ವಡೆಯ ಹಿಟ್ಟಿನಂತೆ ಗಟ್ಟಿಯಾಗಿಯೇ ಇರಲಿ. ನೀರು ಬೆರೆಸುವುದು ಬೇಡ.
ಒಂದು ಗಂಟೆ ಕಾಲ ಬಿಟ್ಟು ಈ ಹಿಟ್ಟನ್ನು ಒಡೆಯಾಕಾರದಲ್ಲಿ ತಟ್ಟಿಕೊಂಡು ಎಣ್ಣೆಗೆ ಬಿಡಿ. ಈಗ ಉದ್ದಿನ ವಡೆಯದೇ ರೀತಿಯ ಅನ್ನದ ವಡೆ ಸವಿಯಲು ಸಿದ್ಧ. ಇದಕ್ಕೆ ಹಸಿಮೆಣಸಿನಕಾಯಿಯ ಖಾರದ ಚಟ್ನಿ ಉತ್ತಮ ಕಾಂಬಿನೇಷನ್.