Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ರವಾ ಉತ್ತಪ್ಪ..

ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ರವಾ ಉತ್ತಪ್ಪ..
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (14:31 IST)
ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಗೆ ಹೆಚ್ಚು ಜನಪ್ರಿಯವಾಗಿರುವುದು ಮತ್ತು ಬಹುತೇಕ ಎಲ್ಲಾ ಮನೆಗಳಲ್ಲೂ ಮಾಡುವ ತಿಂಡಿ ದೋಸೆಯೇ ಆಗಿದೆ. ನೀರು ದೋಸೆ, ಮಸಾಲಾ ದೋಸೆ, ಉತ್ತಪ್ಪ, ಸೆಟ್ ದೋಸೆ ಹೀಗೆ ಹಲವು ಬಗೆಯ ದೋಸೆಗಳು. ಉತ್ತಪ್ಪ ಅಥವಾ ಉತ್ತಪ್ಪಂ ಎನ್ನುವುದು ತರಕಾರಿಗಳನ್ನು ಹಾಕಿ ತಯಾರಿಸುವ ಒಂದು ಬಗೆಯ ದೋಸೆಯಾಗಿದೆ. ಸಾಮಾನ್ಯವಾಗಿ ದೋಸೆಯನ್ನು ತಯಾರಿಸಲು ಅಕ್ಕಿಯನ್ನು ಬಳಸುತ್ತಾರೆ. ಆದರೆ ಈಗ ರವೆಯನ್ನು ಬಳಸಿ ಅತಿ ಶೀಘ್ರವಾಗಿ ಉತ್ತಪ್ಪವನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ಬೇಕಾಗುವ ಸಾಮಗ್ರಿಗಳು:
ರವೆ - 1 ಕಪ್
ಮೊಸರು - 1 ಕಪ್
ಈರುಳ್ಳಿ - 2
ಟೊಮ್ಯಾಟೊ - 2
ಹಸಿಮೆಣಸು - 1
ಕ್ಯಾಪ್ಸಿಕಂ - 1
ಉಪ್ಪು - ರುಚಿಗೆ
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
 
ಒಂದು ಬೌಲ್‌ನಲ್ಲಿ 1 ಕಪ್ ರವೆ ಮತ್ತು 1 ಕಪ್ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು 1/2 ಕಪ್ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ದಪ್ಪ ದೋಸೆಯ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕ್ಯಾಪ್ಸಿಕಂ ಮತ್ತು ಟೊಮ್ಯೊಟೋವನ್ನು ಸೇರಿಸಿಕೊಂಡು ಹಿಟ್ಟನ್ನು ಕಾದ ಹೆಂಚಿನ ಮೇಲೆ ಹಾಕಿ ಸ್ವಲ್ಪ ಹರಡಬೇಕು. ನಂತರ ಅದರ ಮೇಲೆ ಸ್ವಲ್ಪವೇ ಹೆಚ್ಚಿದ ಈರುಳ್ಳಿ, ಟೊಮ್ಯಾಟೋ ಮತ್ತು ಕ್ಯಾಪ್ಸಿಕಂ ಚೂರುಗಳನ್ನು ಉದುರಿಸಿ 2 ಚಮಚ ಎಣ್ಣೆಯನ್ನು ಸವರಿ ದೋಸೆಯನ್ನು ಮಗುಚಿ ಹಾಕಿ ಬೇಯಿಸಿದರೆ ರುಚಿಯಾದ ರವಾ ಉತ್ತಪ್ಪ ಸಿದ್ದವಾಗುತ್ತದೆ. ಇದು ಟೊಮ್ಯಾಟೋ ಮತ್ತು ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಪಟ್ ಸ್ವಾದಿಷ್ಠ ಆಲೂಪಲಾವ್