ಒಂದೇ ರೀತಿಯ ರೈಸ್ ಬಾತ್ ಪಲಾವ್‌ಗಳನ್ನು ತಿಂದು ನಿಮಗೆ ಬೇಜಾರಾಗಿದ್ದಲ್ಲಿ ರುಚಿಕರವಾದ ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಬಹುದಾದ ಆಲೂ ಪಲಾವ್ ಅನ್ನು ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಚಿಕ್ಕದಾಗಿ ಕತ್ತರಿಸಿದ ಆಲೂ 2
ಜೀರಿಗೆ 1 ಚಮಚ
ಬಾಸುಮತಿ ಅಕ್ಕಿ 1/2 ಕಪ್
ತುಪ್ಪ 2 ಚಮಚ
ಒಂದು ಬೆಳ್ಳುಳ್ಳಿ ಮತ್ತು 1 ಪಲಾವ್ ಎಲೆ
1/2 ಚಮಚ ಕಲ್ಲುಪ್ಪು
ಹಸಿ ಏಲಕ್ಕಿ 1
ದಾಲ್ಚಿನ್ನಿ ಸ್ವಲ್ಪ
ಶುಂಠಿ ಪೇಸ್ಟ್ 1 ಚಮಚ ಅಥವಾ ಅದಕ್ಕೂ ಸ್ವಲ್ಪ ಹೆಚ್ಚು
ಪುದೀನ ಎಲೆ 4-5
ಹಸಿಮೆಣಸು 2
ಕೊತ್ತಂಬರಿ ಸ್ವಲ್ಪ
ಕೆಂಪು ಮೆಣಸಿನ ಪುಡಿ 1/2 ಚಮಚ (ಖಾರ ಪ್ರೀಯರಾಗಿದ್ದಲ್ಲಿ 1 ಚಮಚ)
ಸ್ವಲ್ಪ ತೆಂಗಿನ ತುರಿ
ಹುಣಸೆ ಹಣ್ಣಿನ ಹುಳಿ ರಸ 1 ಚಮಚ
ನೀರು 3 ಕಪ್
ಮಾಡುವ ವಿಧಾನ:
ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದರಲ್ಲಿ ಮೇಲೆ ಹೇಳಿದಷ್ಟು ಅಕ್ಕಿಯನ್ನು ತೆಗೆದುಕೊಂಡು ತೊಳೆದು ಪಕ್ಕಕ್ಕಿಡಿ ನಂತರ ತೆಂಗಿನ ತುರಿ, ಕೊತ್ತಂಬರಿ, ಹುಣಸೆ ರಸ , ಬೆಳ್ಳುಳ್ಳಿ, ಏಲಕ್ಕಿ, ಡಾಲ್ಚಿನ್ನಿ, ಪುದೀನ ಎಲೆಯನ್ನು ಒಂದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಅರೆಯಿರಿ. ತದನಂತರ ಒಂದು ಕುಕ್ಕರ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸಿದ್ಧಪಡಿಸಿದ ಪೇಸ್ಟ್ ಹಾಗೂ ಜೀರಿಗೆ, ಶುಂಠಿ, ಪಲಾವ್ ಎಲೆ ಹಾಕಿ ಹುರಿಯಿರಿ. ನಂತರ ಅದರಲ್ಲಿ ಅಕ್ಕಿ ಹಾಕಿ ಸ್ವ ಲ್ಪ ಹೊತ್ತು ಹುರಿದು ನೀರು ಹಾಕಿ ಕತ್ತರಿಸಿದ ಆಲೂಗಡ್ಡೆ ಮೆಣಸಿನ ಪುಡಿ, ಉಪ್ಪು ಕಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವರೆಗೂ ಬೇಯಿಸಿ. ಈಗ ರುಚಿಕರವಾದ ಆಲೂಪಲಾವ್ ರೆಡಿ.
ಇದನ್ನು ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೂ ಬಳಸಬಹುದು ಇದರೊಂದಿಗೆ ಮೊಸರು ಬಜ್ಜಿ ಇದ್ದರೆ ಸುಪರ್ ಕಾಂಬಿನೇಶನ್ ಅಂತಾ ಹೇಳಬಹುದು.