Select Your Language

Notifications

webdunia
webdunia
webdunia
webdunia

ಪ್ರೋಟೀನ್ ದೋಸಾ

ಪ್ರೋಟೀನ್ ದೋಸಾ
ನಾನಾ ರೀತಿಯ ದೋಸೆಗಳನ್ನು ಮಾಡಿಕೊಂಡು ಸವಿಯಬಹುದು. ಹೇಗೆ ಮಾಡಿದರೂ ದೋಸೆಗಳು ರುಚಿಕರವಾಗಿಯೂ ಹಾಗೂ ಎಲ್ಲಾ ವಯೋಮಾನದವರೂ ಇಷ್ಟಪಡುವ ತಿಂಡಿಯಾಗಿದೆ. ಇದರಲ್ಲಿ ಪ್ರೋಟೀನ್ ದೋಸಾ ಕೂಡಾ ಹೊರತಾಗಿಲ್ಲ. ಈ ದೋಸೆಯನ್ನು ಬಾಣಂತಿಯರಿಗೂ ಬೇಕಾದರೂ ಮಾಡಿ ಕೊಡಬಹುದು.

(ಹಸಿಮೆಣಸನ್ನು ಹಾಕಬಾರದು) ಪ್ರೋಟೀನ್ ದೋಸೆಯ ವಿಶೇಷವೇನೆಂದರೆ ಈ ದೋಸೆಯ ಹಿಟ್ಟಿಗೆ ಕಾಲಾವಕಾಶ ಕೊಡಬೇಕೇಂತೇನಿಲ್ಲ. ಹಾಗೆಯೇ ಎರೆದು ತಿನ್ನಬಹುದು. ಹಾಗಾದರೆ ಹೇಗೆ ಮಾಡುವುದು ಎಂದು ಹೇಳ್ತೀವಿ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ. 
 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 2 ಕಪ್ ಹೆಸರುಕಾಳು
* 1 ಕಪ್ ಅಕ್ಕಿ
* 1 ಕಪ್ ಉದ್ದಿನಬೇಳೆ
* 2 ಚಮಚ ಮೆಂತ್ಯೆ ಕಾಳು
* 2 ಈರುಳ್ಳಿ
* ಸ್ವಲ್ಪ ಮೆಣಸಿನಕಾಯಿ
* ಮೆಂತ್ಯೆಸೊಪ್ಪು
* 1 ಚಮಚ ಜೀರಿಗೆ
* ಕರಿಬೇವು
* ಕೊತ್ತಂಬರಿ ಸೊಪ್ಪು
* ಉಪ್ಪು
5 ಗ್ರಾಂ ENO
 
ತಯಾರಿಸುವ ವಿಧಾನ :
 
 ಮೊದಲು  2 ಕಪ್ ಹೆಸರುಕಾಳು,  1 ಕಪ್ ಅಕ್ಕಿ,  1 ಕಪ್ ಉದ್ದಿನಬೇಳೆ ಮತ್ತು  2 ಚಮಚ ಮೆಂತ್ಯೆ ಕಾಳು ಇವುಗಳನ್ನು 10 ರಿಂದ 12 ಗಂಟೆಗಳ ಕಾಲ ನೆನೆಸಿಡಬೇಕು. ನಂತರ  ಅದನ್ನು ನುಣ್ಣಗೆ ರುಬ್ಬಬೇಕು. ನಂತರ 2 ಈರುಳ್ಳಿ, ಹಸಿಮೆಣಸಿನಕಾಯಿ, ಮೆಂತ್ಯೆಸೊಪ್ಪು, 1 ಚಮಚ ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ ರುಬ್ಬಿಕೊಂಡು ಈಗಾಗಲೇ ರುಬ್ಬಿಕೊಂಡ ದೋಸೆ ಹಿಟ್ಟಿಗೆ ಸೇರಿಸಬೇಕು. ಈ ಮಿಶ್ರಣವನ್ನು ಹುದುಗಲು ಬಿಡಬೇಕೆಂದೇನಿಲ್ಲ. ನಂತರ ಇದಕ್ಕೆ 1 ಚಮಚ ಅಂದರೆ 5 ಗ್ರಾಂ ENO ಸೇರಿಸಿ 5 ನಿಮಿಷ ಬಿಟ್ಟು ದೋಸೆ ಎರೆದರೆ ಗರಿಗರಿಯಾದ ಪ್ರೋಟೀನ್ ದೋಸೆ ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸು 40 ದಾಟಿದ ನಂತರ ಬರುವ ಲೈಂಗಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಪುರುಷರು ಈ ಆಹಾರ ಸೇವಿಸಿ