ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 1 ಕಪ್ ಅಕ್ಕಿ ಹಿಟ್ಟು
* ಮೆಂತ್ಯ ಸೊಪ್ಪು
* ಸಬ್ಬಸಿಗೆ ಸೊಪ್ಪು
* ಪಾಲಾಕ್ ಸೊಪ್ಪು
* ಕ್ಯಾರೆಟ್
* ಈರುಳ್ಳಿ
* ಮೂಲಂಗಿ
* ಸೌತೆಕಾಯಿ
* ಕರಿಬೇವು
* ಜೀರಿಗೆ
* ಎಳ್ಳು
* ಹಸಿಮೆಣಸಿನ ಕಾಯಿ
* ಹುರಿದು ಪುಡಿ ಮಾಡಿಕೊಂಡ ಶೇಂಗಾ
* ಅರಿಶಿನ
* ಕೊತ್ತಂಬರಿ
* ಕಾಯಿತುರಿ
* ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ :
ಮೊದಲು ಕ್ಯಾರೆಟ್, ಸೌತೆಕಾಯಿ, ಮೂಲಂಗಿಯನ್ನು ತುರಿದಿಟ್ಟುಕೊಂಡು ಈರುಳ್ಳಿ, ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು ಮತ್ತು ಪಾಲಾಕ್ ಸೊಪ್ಪನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಳ್ಳಬೇಕು. ನಂತರ ಹಸಿಮೆಣಸಿನಕಾಯಿ, ಕಾಯಿತುರಿ, ಉಪ್ಪು, ಅರಿಶಿನ, ಕರಿಬೇವು, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ನಂತರ ಅಕ್ಕಿಹಿಟ್ಟಿಗೆ ಈ ಎಲ್ಲಾ ರುಬ್ಬಿರುವ ಮಿಶ್ರಣ, ತುರುದುಕೊಂಡ ತರಕಾರಿ, ಸೊಪ್ಪುಗಳು, ಶೇಂಗಾ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲೆಸಬೇಕು. (ಅವಶ್ಯವಿದ್ದರೆ ಮಾತ್ರ ನೀರನ್ನು ಹಾಕಬೇಕು) ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ತವಾದ ಮೇಲೆ ತೆಳ್ಳಗೆ ರೊಟ್ಟಿಯನ್ನು ತಟ್ಟಿ ಬೇಯಿಸಬೇಕು. ಈ ಬಿಸಿ ಬಿಸಿಯಾದ ರೊಟ್ಟಿಯನ್ನು ತುಪ್ಪದ ಜೊತೆ ಸವಿಯಲು ರುಚಿಕರವಾಗಿರುತ್ತದೆ.