Publish Date: Thu, 24 Oct 2019 (09:09 IST)
Updated Date: Thu, 24 Oct 2019 (09:14 IST)
ಬೆಂಗಳೂರು : ಅನ್ನ ಉಳಿದಿದೆ ಎಂದು ಅದನ್ನು ಎಸೆಯುವ ಬದಲು ಅದರಿಂದ ರುಚಿಕರವಾದ, ಸುಲಭವಾದ ರೈಸ್ ರಸಗುಲ್ಲ ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು:
ಬೇಯಿಸಿಟ್ಟುಕೊಂಡ ಅನ್ನ 2 ಕಪ್, ಸಕ್ಕರೆ 1 ಕಪ್, ಮೈದಾ 1 ಚಮಚ, ಕಾರ್ನ್ ಪ್ಲೋರ್ 1 ಚಮಚ
ಮಾಡುವ ವಿದಾನ :
ಮೊದಲಗೆ ಅನ್ನವನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ತುಪ್ಪ, ಮೈದಾ 1 ಚಮಚ, ಕಾರ್ನ್ ಪ್ಲೋರ್ 1 ಚಮಚ ಹಾಕಿ ಅದು ಮೃದು ಆಗುವವರೆಗೂ ಚೆನ್ನಾಗಿ ಕಲಸಿಕೊಳ್ಳಿ. ಅದು ಮೃದು ಆದ ಮೇಲೆ ಅದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಮತ್ತು ಸಕ್ಕರೆ ಹಾಕಿ ಕುದಿಸಿ. ಅದು ಕುದಿಯಲು ಶುರುಮಾಡಿದಾಗ ಅದಕ್ಕೆ ಅನ್ನದಿಂದ ತಯಾರಿಸಿದ ಉಂಡೆಯನ್ನು ಹಾಕಿ 15 ನಿಮಿಷ ಕಾಯಿಸಿ ಬಳಿಕ ತಣ್ಣಗಾಗಲು ಬಿಡಿ. ಈಗ ರೈಸ್ ರಸಗುಲ್ಲ ತಿನ್ನಲು ರೆಡಿ.