ಮೊದಲು ಪನ್ನೀರ್ ಅನ್ನು ತೆಗೆದುಕೊಂಡು 2 ಇಂಚ್ ಉದ್ದ ಹಾಗು 1 ಇಂಚು ಉದ್ದ ಮತ್ತು ಮುಕ್ಕಾಲು ಇಂಚು ದಪ್ಪಕ್ಕೆ ಕತ್ತರಿಸಿಕೊಳ್ಳಿ ನಂತರ ಕತ್ತರಿಸಿದ ಪನ್ನೀರನ್ನು ನೀರಿನಲ್ಲಿ ಅರ್ಧಗಂಟೆ ಹಾಗೆಯೇ ಬಿಡಿ. ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಅನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದರಲ್ಲಿ ಕಡಲೆಹಿಟ್ಟು ಜೀರಿಗೆ, ರೆಡ್ ಚಿಲ್ಲಿ ಪೌಡರ್ ಉಪ್ಪು, ನಿಂಬೆರಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕಾರ್ನ್‍ಫ್ಲೋರ್ ಮೊಸರನ್ನು ಹಾಕಿ ಗಂಟಾಗದ ರೀತಿಯಲ್ಲಿ ಕಲೆಸಿಕೊಳ್ಳಿ ನಂತರ ನೆನ ಇಟ್ಟ ಪನ್ನೀರ್ ಕಲೆಸಿದ ಹಿಟ್ಟಿನಲ್ಲಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಒಂದು ಬಾಣೆಲೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆಯನ್ನು ಹಾಕಿ ಕಲೆಸಿಟ್ಟ ಪನ್ನೀರ್ ಅನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿದು ಅದರ ಮೇಲೆ ಚಾಟ್ ಮಸಾಲಾವನ್ನು ಉದುರಿಸಿದರೆ ರುಚಿಕರವಾದ ಪನ್ನೀರ್ ಕೋಳಿವಡಾ ಸಿದ್ಧವಾಗುತ್ತದೆ.
ಟೊಮೇಟೊ ಕೆಚಫ್‌ನೊಂದಿಗೆ ಇದರ ಕಾಂಬಿನೇಶನ್ ಉತ್ತಮವಾಗಿರುತ್ತದೆ ಎಂದು ಹೇಳಬಹುದು.