ವರ್ಷಕ್ಕೊಮ್ಮೆ ಬರುವ ಯುಗಾದಿಯಂದು ಕಹಿಬೇವನ್ನು ತಿನ್ನುವುದಕ್ಕೆ ನಮ್ಮಲ್ಲಿ ಕೆಲವರು ಮೂಗು ಮುರಿಯುವುದುಂಟು. ಕಹಿಬೇವು ಹೆಸರೇ ಸೂಚಿಸುವಂತೆ ರುಚಿಯು ಕಹಿಯಾಗಿರುತ್ತದೆ. ಅದಕ್ಕೆ ನಮ್ಮ ಹಿರಿಯರು ''ಅದರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ'' ಎಂದಿದ್ದಾರೆ. ಇದನ್ನು ಕಹಿಬೇವನ್ನು ನೋಡಿಯೇ ಹೇಳಿರಬೇಕು. ಕಹಿಬೇವಿನ ಎಲೆಯನ್ನು ದಿನಕ್ಕೆ ಒಂದು ಎಲೆಯನ್ನು ಜಗಿದರೂ ನಾವು ಉತ್ತಮ ಆರೋಗ್ಯವನ್ನು ಹೊಂದಬಹುದು. ವೈದ್ಯಕೀಯ ಚಿಕಿತ್ಸೆಗಳಲ್ಲಿಯೂ ಈ ಬೇವು ಬಹಳಷ್ಟು ಉಪಯೋಗವಾಗುತ್ತದೆ.
* ಶುದ್ಧ ಕಹಿಬೇವಿನ ಎಲೆಯನ್ನು ಪ್ರತಿದಿನವೂ ಸೇವಿಸುವುದರಿಂದ ರಕ್ತವು ಶುದ್ಧಿಯಾಗುತ್ತದೆ.
* ಈ ಬೇವಿನ ಮರವು ಮನೆಯ ಬಳಿ ಇದ್ದರೆ ಸುತ್ತಲಿನ ಪರಿಸರವು ಶುದ್ಧವಾಗಿರುವುದಲ್ಲದೇ ವಾಯುವಿನ ಮೂಲಕ ಬರುವ ವೈರಸ್ಸುಗಳನ್ನು ಈ ಮರದ ಎಲೆಗಳು ಹೊಡೆದೋಡಿಸುತ್ತದೆ.
* ಕಹಿಬೇವಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ಅಲರ್ಜಿ ನಿವಾರಕಗಳು ಹೇರಳವಾಗಿರುವುದರಿಂದ ಇದು ದೇಹದಲ್ಲಿ ಉತ್ತಮ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.
* ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಯಕೃತ್ತಿನ ಕ್ಷಮತೆ ಹೆಚ್ಚಳವಾಗುತ್ತದೆ ಜೊತೆಗೆ ಜೀರ್ಣ ಮತ್ತು ಶ್ವಾಸವ್ಯವಸ್ಥೆಯನ್ನೂ ಉತ್ತಮಗೊಳಿಸುತ್ತದೆ.
* ಕಣ್ಣಿನ ಉರಿ, ಕೆಂಪಗಾಗುವುದು ಮುಂತಾದ ಸಮಸ್ಯೆಗಳಿಗೆ ಕಹಿಬೇವನ್ನು ಸೇವಿಸುವುದರಿಂದ ಶಮನವಾಗುವುದಲ್ಲದೇ ದೃಷ್ಟಿಯೂ ತೀಕ್ಷ್ಣವಾಗುತ್ತದೆ.
* ಬೇವಿನ ರಸವನ್ನು ಸೇವಿಸುವುದರಿಂದ ಅವು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೀರಿ ಅವುಗಳನ್ನು ದೇಹದಿಂದ ವಿಸರ್ಜಿಸುವಂತೆ ಮಾಡುತ್ತದೆ.
* ಕರಿಬೇವಿನ ಎಲೆಗಳು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರದಬ್ಬಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ.
* ಬೇವಿನ ಎಲೆಗಳನ್ನು ಗಾಯದ ಮೇಲೆ ಹಚ್ಚುವುದರಿಂದ ಗಾಯಗಳು ಬೇಗನೆ ಮಾಯುವುದಲ್ಲದೇ, ಸಿಡುಬು, ದದ್ದು ಇಂತಹ ಮಾರಕ ರೋಗಗಳನ್ನು ತಡೆಗಟ್ಟುತ್ತದೆ.
* ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತಮುತ್ತ ಹರಡುವುದರಿಂದ ಅದರ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ. ಇದರಿಂದ ಮಲೇರಿಯಾದಂತಹ ರೋಗಗಳು ಬರದಂತೆ ತಡೆಯಬಹುದು.
* ಬೇವಿನ ಎಣ್ಣೆಯಿಂದ ಉಗುರುಗಳ ಒಳಭಾಗದಲ್ಲಿ, ಕೂದಲ ಬುಡದಲ್ಲಿ ಶೀಲಿಂದ್ರಗಳಿಂದ ಉಂಟಾಗುವ ಸೋಂಕನ್ನು ತಡೆಗಟ್ಟುತ್ತದೆ.
* ಬೇವಿನ ಮರದ ತೊಗಟೆಗಳಲ್ಲಿ ಕಂಡುಬರುವ ರಾಸಾಯನಿಕಗಳು ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
* ಸಂಧಿವಾತಕ್ಕೆ ಬೇವಿನ ಎಲೆ ಮತ್ತು ಬೇವಿನ ತೊಗಟೆಯನ್ನು ಅರೆದು ತಯಾರಿಸಿದ ಲೇಪನವು ಉತ್ತಮ ಪರಿಹಾರವನ್ನು ನೀಡುತ್ತದೆ.
* ಬೇವಿನ ಎಲೆಯಿಂದ ಸಂದುಗಳಲ್ಲಿ ಕಾಣಿಸುವ ನೋವು, ಬಾವುಗಳೂ ಸಹ ಕಡಿಮೆಯಾಗುತ್ತದೆ.
* ಬೇವಿನ ಎಲೆಯನ್ನು ಹಾಕಿ ಕುದಿಸಿದ ನೀರನ್ನು ಕೂದಲು ಉದುರುವದನ್ನು ತಡೆಯಲು ಮತ್ತು ತಲೆಹೊಟ್ಟಿನ ನಿವಾರಣೆಯಲ್ಲಿಯೂ ಬಳಸಲಾಗುತ್ತದೆ.
* ಕಹಿಬೇವಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಆರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.
* ಬ್ಲಾಕ್‌ಹೆಡ್ ಎಂಬ ಕಲೆಗಳನ್ನು ಚರ್ಮದಿಂದ ನಿವಾರಿಸಲು ಬೇವಿನ ಎಲೆಯ ಲೇಪನವು ಒಂದು ಉತ್ತಮ ಆಯ್ಕೆಯಾಗಿದೆ.
* ನಿಯಮಿತವಾಗಿ ಬೇವಿನ ಎಲೆಗಳ ಲೇಪನವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಸೆಳೆತವನ್ನು ಅಥವಾ ವೃದ್ಧಾಪ್ಯವನ್ನು ಮುಂದೂಡಬಹುದು.
* ಚರ್ಮದ ಉರಿಯೂತ ಅಥವಾ ಚರ್ಮಕ್ಕೆ ಸಂಬಂಧಪಟ್ಟ ಇತರ ತೊಂದರೆಗಳನ್ನು ನಿವಾರಿಸಬಲ್ಲ ಕ್ಷಮತೆಯು ಕರಿಬೇವಿಗಿದೆ.
* ಎರಡು ಹನಿ ಬೇವಿನ ಎಣ್ಣೆಯನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.
* ಪ್ರತಿದಿನ ಎರಡು ಕಹಿಬೇವಿನ ಎಲೆಯನ್ನು ತಿನ್ನುವುದರಿಂದ ಅಲ್ಸರ್ ಖಾಯಿಲೆಯು ಗುಣಮುಖವಾಗುತ್ತದೆ.
* ನಿಯಮಿತವಾಗಿ ಕಹಿಬೇವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಬಹುದು.
* ಕಣ್ಣಿನ ಸುತ್ತ ಆದ ಕಪ್ಪು ಕಲೆಯ ನಿವಾರಣೆಗೆ ಕಹಿಬೇವು ಉತ್ತಮ ಮನೆಮದ್ದು.